ಸೂಫಿ ಶಮ್ಸ್ ಹೇಳಿದ್ದು : ಪ್ರೇಮದಿಂದಷ್ಟೆ ಮನೆಗೆ ಪ್ರವೇಶ ಸಾಧ್ಯ…

ಶಮ್ಸ್, ತಬ್ರೀಜ್’ನಲ್ಲಿ ಆಗಿಹೋದ ಶ್ರೇಷ್ಠ ಸೂಫಿ. 12ನೇ ಶತಮಾನ ಈತನ ಕಾಲಮಾನ. ಶಮ್ಸ್, ಜಲಾಲುದ್ದಿನ್ ರೂಮಿಯ ಗುರುವೂ ಆಗಿದ್ದನು. 

shams

“ಬುದ್ಧಿವಂತಿಕೆ ನಿಮ್ಮನ್ನು ಬಾಗಿಲವರೆಗೆ ಕರೆದೊಯ್ಯಬಹುದು; ಮನೆಯೊಳಗೆ ಪ್ರವೇಶ ದೊರಕಿಸಲು ಪ್ರೇಮದಿಂದಷ್ಟೆ ಸಾಧ್ಯ”  ~ ಇದು ಶಮ್ಸ್ ತಬ್ರೀಜಿ ಹೇಳಿದ ಮಾತು.

ಬಹಳ ಬಾರಿ ನಮ್ಮ ಬುದ್ಧಿವಂತಿಕೆಯೇ ನಮಗೆ ತಡೆಯಾಗಿಬಿಡುತ್ತದೆ. ಬುದ್ಧಿವಂತಿಕೆಯು ತರ್ಕವನ್ನು ಮುಂದಿಡುತ್ತದೆ. ನಿಯಮ, ಸಿದ್ಧಾಂತಗಳ ಯೋಚನೆ ಮಾಡುತ್ತಾ ಹೊಸ್ತಿಲಲ್ಲೆ ಉಳಿಸಿಬಿಡುತ್ತದೆ. ಬುದ್ಧಿವಂತಿಕೆಯು ನಮಗೆ ಪ್ರೇಮಿಯ (ಭಗವಂತನ) ಮನೆಯನ್ನು ತಲುಪುವ ದಾರಿ ಹುಡುಕಿಕೊಳ್ಳಲು ಸಹಾಯ ಮಾಡುತ್ತದೆಯೇನೋ ನಿಜ. ಆದರೆ, ಪ್ರೇಮಿಯ (ಭಗವಂತನ) ಮನೆಯೊಳಕ್ಕೆ ಪ್ರವೇಶ ಪಡೆಯಲು ಅಪರಿಮಿತ ಪ್ರೇಮವೊಂದೇ ಅರ್ಹತೆ. 

ಪ್ರೇಮವು ಶರಣಾಗತಿಯನ್ನು, ನಂಬಿಕೆಯನ್ನು, ಶ್ರದ್ಧೆಯನ್ನು ನೀಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಮವು ನಾನು ನೀನೆಂಬ ಭೇದವನ್ನು ಅಳಿಸುತ್ತದೆ. ಪ್ರೇಮವು ಪ್ರೇಮಿಗಳ (ಭಕ್ತ ಮತ್ತು ಭಗವಂತನ) ನಡುವೆ ಇರಬಹುದಾದ ಎಲ್ಲ ಗೋಡೆಗಳನ್ನೂ ತೊಡೆದು ಹಾಕುತ್ತದೆ. 

Leave a Reply