ಹದಿನೆಂಟು ಪುರಾಣಗಳೆಲ್ಲ ಒಟ್ಟು ನಾಲ್ಕು ಲಕ್ಷ ಶ್ಲೋಕಗಳಿವೆ. ಇದಕ್ಕೆ ಮಹಾಭಾರತದ ಒಂದು ಲಕ್ಷ ಶ್ಲೋಕ ಸೇರಿದರೆ ಪುರಾಣಗಳಲ್ಲಿ ಒಟ್ಟು ಐದು ಲಕ್ಷ ಶ್ಲೋಕಗಳಾಗುತ್ತವೆ.
ವೇದಗಳಿಗೆ ಪೂರಕವಾಗಿ ವೇದಾರ್ಥ ಚಿಂತನೆ ನಡೆಯಬೇಕು ಎನ್ನುವ ಉದ್ದೇಶದಿಂದ ವೇದವ್ಯಾಸರು ವೇದಗಳಿಗೆ ಅನ್ವಯವಾಗಿ ಇತಿಹಾಸ ಪುರಾಣಗಳನ್ನು ರಚಿಸಿದರು ಎಂದು ಹೇಳಲಾಗುತ್ತದೆ. ವೇದವ್ಯಾಸರು ರಚಿಸಿದರೆಂದು ಹೇಳಲಾದ ಮಹಾಪುರಾಣಗಳು ಹದಿನೆಂಟು. ಅವುಗಳು ಹೀಗಿವೆ :
- ಬ್ರಾಹ್ಮ ಅಥವಾ ಬ್ರಹ್ಮಪುರಾಣ [10,000 ಶ್ಲೋಕಗಳು]
- ಪಾದ್ಮ ಅಥವಾ ಪದ್ಮಪುರಾಣ [55,000 ಶ್ಲೋಕಗಳು]
- ವೈಷ್ಣವ ಅಥವಾ ವಿಷ್ಣು ಪುರಾಣ [23,000 ಶ್ಲೋಕಗಳು]
- ಶೈವ ಅಥವಾ ಶಿವ ಪುರಾಣ ಅಥವಾ ವಾಯು ಪುರಾಣ [24,000 ಶ್ಲೋಕಗಳು]
- ಭಾಗವತ ಪುರಾಣ [18,000 ಶ್ಲೋಕಗಳು]
- ನಾರದೀಯ ಅಥವಾ ನಾರದ ಪುರಾಣ [25,000 ಶ್ಲೋಕಗಳು]
- ಮಾರ್ಕಂಡೇಯ ಪುರಾಣ [9,000 ಶ್ಲೋಕಗಳು]
- ಆಗ್ನೇಯ ಅಥವಾ ಅಗ್ನಿ ಪುರಾಣ [15,400 ಶ್ಲೋಕಗಳು]
- ಭವಿಷ್ಯತ್ ಪುರಾಣ [14,500 ಶ್ಲೋಕಗಳು]
- ಬ್ರಹ್ಮವೈವರ್ತ ಪುರಾಣ [18,000 ಶ್ಲೋಕಗಳು]
- ಲೈಂಗ ಅಥವಾ ಲಿಂಗ ಪುರಾಣ [11,000 ಶ್ಲೋಕಗಳು]
- ವಾರಾಹ ಅಥವಾ ವರಾಹ ಪುರಾಣ [24,000 ಶ್ಲೋಕಗಳು]
- ಸ್ಕಾಂದ ಅಥವಾ ಸ್ಕಂದ ಪುರಾಣ [81,100 ಶ್ಲೋಕಗಳು]
- ವಾಮನ ಪುರಾಣ [10,000 ಶ್ಲೋಕಗಳು]
- ಕೌರ್ಮ ಅಥವಾ ಕೂರ್ಮ ಪುರಾಣ [17,000 ಶ್ಲೋಕಗಳು]
- ಮಾತ್ಸ್ಯ ಅಥವಾ ಮತ್ಸ್ಯ ಪುರಾಣ [14,000 ಶ್ಲೋಕಗಳು]
- ಗಾರುಡ ಅಥವಾ ಗರುಡ ಪುರಾಣ[19,000 ಶ್ಲೋಕಗಳು]
- ಬ್ರಹ್ಮಾಂಡ ಪುರಾಣ [12,000 ಶ್ಲೋಕಗಳು]
ಹಿಂದಿನ ಭಾಗವನ್ನು ಇಲ್ಲಿ ಓದಿ :https://aralimara.com/2018/06/29/sanatana11/