ತಾವೋ ತಿಳಿವು #78 ~ ಸಂತನಿಗೆ ಈ ಸೂಕ್ಷ್ಮ ಗೊತ್ತು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

tao

ತಾವೋದಲ್ಲಿ ಒಂದಾದಾಗ
ಆಕಾಶ, ಶುಭ್ರ, ತಿಳಿ
ಭೂಮಿ, ಸುಭದ್ರ
ಚೈತನ್ಯ, ಸೃಷ್ಟಿಶೀಲ
ಕಣಿವೆ, ಬಸಿರು
ಒಂದನ್ನೊಂದು ಹುಟ್ಟಿಸುತ್ತ
ಸತತವಾಗಿ ಹೊಸದಾಗುತ್ತ
ಬದುಕು, ಜೀವಂತಿಕೆಯ ತಾಣ

ಈ ಬಂಧ ತುಂಡಾದಾಗ
ಆಕಾಶ, ಚೂರು ಚೂರು
ಭೂಮಿಯಲ್ಲಿ ಬಿರುಕು
ಚೈತನ್ಯ ನಿರ್ವೀರ್ಯ ಮತ್ತು
ಕಣಿವೆ, ಬರಡು.

ಸಂತನಿಗೆ ಈ ಸೂಕ್ಷ್ಮ ಗೊತ್ತು
ಅಂತೆಯೇ
ಸೃಷ್ಟಿಯ ಬಗ್ಗೆ ಅವನಿಗೆ ಅಪಾರ ಅಂತಃಕರಣ
ವಿನಮ್ರತೆಯತ್ತ ಅವನ ಸಾಧನೆ
ರತ್ನದಂತೆ ಹೊಳೆಯುವದಕ್ಕಿಂತ
ತಾವೋ ಕೆತ್ತಿದ ಸಾಮಾನ್ಯ ಕಲ್ಲಾಗುವುದು
ಅವನ ಏಕೈಕ ಗುರಿ.

Leave a Reply