ಒಂದು ದಿನ ಝೆನ್ ಮಾಸ್ಟರ್ ಚಾವೋ ಚೌ ಧ್ಯಾನ ಮಂದಿರದ ಹಿಂದೆ ಸುಮ್ಮನೇ ಓಡಾಡುತ್ತಿದ್ದ ಒಬ್ಬ ಯುವ ಸನ್ಯಾಸಿಯನ್ನು ಮಾತಾಡಿಸಿದ,
“ಬೇರೆ ಸನ್ಯಾಸಿಗಳೆಲ್ಲ ಎಲ್ಲಿ? ಯಾರೂ ಕಾಣ್ತಾ ಇಲ್ವಲ್ಲ “
“ಎಲ್ಲ ಕೆಲಸಕ್ಕೆ ಹೋಗಿದ್ದಾರೆ” ಸನ್ಯಾಸಿ ಉತ್ತರಿಸಿದ.
ಮಾಸ್ಟರ್, ಸನ್ಯಾಸಿಯ ಕೈಗೆ ಒಂದು ಹರಿತ ಚೂರಿ ಕೊಟ್ಚು, ತನ್ನ ಕತ್ತು ಮುಂದೆ ಮಾಡಿ ಕೇಳಿದ,
“ಈ ಆಶ್ರಮದ ಮುಖ್ಯಸ್ಥನಾಗಿ ನನಗೆ ಕೆಲವು ಬಹಳ ಮುಖ್ಯ ಜವಾಬ್ದಾರಿಗಳಿವೆ, ನನ್ನ ಕುತ್ತಿಗೆ ಕತ್ತರಿಸಲು ಸಹಾಯ ಮಾಡುವೆಯಾ?”
ಯುವ ಸನ್ಯಾಸಿ ದಿಕ್ಕಾಪಾಲಾಗಿ ಓಡಿ ಹೋದ.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)