‘ಮರಳು ಮತ್ತು ನೊರೆ’ ಕೃತಿಯಿಂದ | ಮೂಲ: ಖಲೀಲ್ ಗಿಬ್ರಾನ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಯೌವನ ಮತ್ತು ಜ್ಞಾನ, ಒಂದೇ ಗುಡಿಯಲ್ಲಿ ಮುಖಾಮುಖಿಯಾಗುವುದೇ ಇಲ್ಲ.
ಹರೆಯ ಜ್ಞಾನದ ಹುಡುಕಾಟದಲ್ಲಿದ್ದರೆ; ಅರಿವು, ಬದುಕಲು ಹಾತೊರೆಯುತ್ತದೆ.
ನೀನು ಕಿಟಕಿಯೊಳಗೆ ಕುಳಿತು ಹೊರಗೆ ನೋಡುತ್ತಿದ್ದಿಯಾ ಅಂದುಕೋ.
ನಿನ್ನ ಬಲಭಾಗದಲ್ಲಿ ಒಬ್ಬ ಸನ್ಯಾಸಿನಿ ಬರುತ್ತಿದ್ದಾಳೆ; ಮತ್ತು ಎಡಭಾಗದಲ್ಲಿ ಒಬ್ಬ ವೇಶ್ಯೆ.
ನಿನ್ನ ಭೋಳೆ ಮನಸ್ಸು ಏನು ಹೇಳಬಹುದು ?
ಒಬ್ಬಳು ಎಷ್ಟು ಸಾತ್ವಿಕಳು ಮತ್ತು ಇನ್ನೊಬ್ಬಾಕೆ ಎಷ್ಟು ಅನೈತಿಕ ಹೆಂಗಸು ಅಂತ ತಾನೇ ?
ಈಗ ಕಣ್ಣು ಮುಚ್ಚಿಕೊಂಡು ಕೇಳಿಸಿಕೋ ;
“ಒಬ್ಬಳು ಪ್ರಾರ್ಥನೆಯ ಮೂಲಕ ನನ್ನನ್ನು ಹುಡುಕುತ್ತಿದ್ದರೆ,
ಇನ್ನೊಬ್ಬಳು ನೋವಿನಾಳಕ್ಕಿಳಿದು ನನ್ನ ಕದ ತಟ್ಟುತ್ತಿದ್ದಾಳೆ.
ಇಬ್ಬರ ಆತ್ಮಗಳೂ ನನ್ನ ಆತ್ಮದೊಂದಿಗೆ ಒಂದಾಗುತ್ತಿವೆ “