ಗೆಲ್ಲುವುದಕ್ಕಿಂತ ಸೋಲದೆ ಇರುವುದು ಮುಖ್ಯ : ಅರಳಿಮರ POSTER

ಗೆಲ್ಲುವುದು ಮುಖ್ಯವೋ? ಸೋಲುವುದು ಮುಖ್ಯವೋ? ಅವೆರಡೂ ಒಂದೆಯೋ ಅಥವಾ ಬೇರೆಬೇರೆಯೋ…!?

21

ಗೆದ್ದೇ ಗೆಲ್ಲುವೆ ಎಂಬ ಆತ್ಮವಿಶ್ವಾಸಕ್ಕಿಂತ ಎಲ್ಲಿಯೂ ಸೋಲಬಾರದು ಎನ್ನುವ ಎಚ್ಚರ ನಮ್ಮನ್ನು ಹೆಚ್ಚು ಅರ್ಥಪೂರ್ಣವಾಗಿ ಗುರಿ ತಲುಪಿಸುತ್ತದೆ. 

ಆತ್ಮವಿಶ್ವಾಸ ಕೆಲವೊಮ್ಮೆ ಅತಿರೇಕವಾಗಿ ಅಹಂಕಾರಕ್ಕೆ ಪರಿವರ್ತನೆಗೊಳ್ಳುವ ಅಪಾಯವಿರುತ್ತದೆ. ಗೆಲ್ಲಬೇಕು, ಗೆದ್ದೇ ಗೆಲ್ಲುವ ಅನ್ನುವ ನಿರ್ಣಯಗಳು ಇತರ ಸಂಗತಿಗಳನ್ನು ಕಡೆಗಣಿಸುವಂತೆ ಮಾಡಬಹುದು. ಅಥವಾ ಗುರಿಯೊಂದನ್ನೆ ಗಮನದಲ್ಲಿಟ್ಟುಕೊಂಡು ದಾರಿ ತಪ್ಪಲೂಬಹುದು. ಆದರೆ, ಸೋಲಬಾರದು ಅನ್ನುವ ಪ್ರಜ್ಞೆ ಅಥವಾ ಎಚ್ಚರ ಹಾಗಲ್ಲ. ಅದು ನಮ್ಮಿಂದ ತಪ್ಪುಗಳಾದಂತೆ ರಕ್ಷಿಸುತ್ತದೆ. ಸರಿಯಾದ ಹಾದಿಯಲ್ಲಿ ನಡೆಸುತ್ತದೆ. ಪ್ರಾಮಾಣಿಕ ಪ್ರಯತ್ನಕ್ಕೆ ಪ್ರೇರಣೆ ನೀಡುತ್ತದೆ. ಪರಿಣಾಮ, ನಾವು ಗುರಿತಲುಪುವ ಪ್ರಕ್ರಿಯೆ ಹೆಚ್ಚು ಅರ್ಥಪೂರ್ಣವಾಗುತ್ತದೆ. 

 

Leave a Reply