ಮೊದಲು ಚಹಾ ಕುಡಿ ~ ಝೆನ್ ಕಥೆ

ಝೆನ್ ಮಾಸ್ಟರ್ ಜೋಶು, ತನ್ನ ಆಶ್ರಮದಲ್ಲಿ ಓಡಾಡುತ್ತಿದ್ದ ಸನ್ಯಾಸಿಯೊಬ್ಬನನ್ನು ಮಾತಾಡಿಸಿದ ;
“ನಾನು ಮೊದಲು ನಿನ್ನ ನೋಡಿದ್ದೀನಾ ?”
“ಇಲ್ಲ ಮಾಸ್ಟರ್, ನಾನು ಇವತ್ತೇ ಆಶ್ರಮಕ್ಕೆ ಬಂದಿರೋದು”
“ಓಹ್ ! ಹೌದಾ.. ಹಾಗಾದರೆ ಮೊದಲು ಚಹಾ ಕುಡಿ”

ಆಮೇಲೆ ಜೋಶು ಇನ್ನೊಬ್ಬನನ್ನು ಮಾತಾಡಿಸಿದ ;
“ನೀನು? ನೀನೂ ಹೊಸಬನಾ ಆಶ್ರಮಕ್ಕೆ?”
“ಇಲ್ಲ ಮಾಸ್ಟರ್ ನಾನು ಹಳಬ, ಎರಡು ವರ್ಷ ಆಯಿತು ನಾನು ಆಶ್ರಮಕ್ಕೆ ಬಂದು”
“ಓಹ್ ! ಹೌದಾ… ಹಾಗಾದರೆ ಮೊದಲು ಚಹಾ ಕುಡಿ”

ಈ ಮಾತುಕತೆಯನ್ನು ಕುತೂಹಲದಿಂದ ಗಮನಿಸುತ್ತಿದ್ದ ಸನ್ಯಾಸಿಯೊಬ್ಬ ಜೋಶೋನನ್ನು ಪ್ರಶ್ನೆ ಮಾಡಿದ;
“ಮಾಸ್ಟರ್, ಏನಿದು ವಿಶೇಷ? ಆ ಇಬ್ಬರಿಗೂ ಚಹಾ ಕುಡಿಯಲು ಹೇಳಿದಿರಲ್ಲಾ?”
“ಓಹ್ ನೀನಿನ್ನೂ ಇಲ್ಲೇ ಇದ್ದಿಯಾ ? ಹಾಗಾದರೆ ಮೊದಲು ಚಹಾ ಕುಡಿ”

Leave a Reply