ಹಳೆಯ ಚೈನಾದಲ್ಲಿ ಇಬ್ಬರು ಕುರಿಗಾಹಿ ಗೆಳೆಯರಿದ್ದರು. ಒಬ್ಬನ ಹೆಸರು ಝಾಂಗ್ ಇನ್ನೊಬ್ಬನ ಹೆಸರು ಗೂ.
ಝಾಂಗ್ ಗೆ ಜೂಜಿನ ಹುಚ್ಚು. ಕುರಿಗಳನ್ನು ಮೇಯಲು ಬಿಟ್ಟು ಗೆಳೆಯರೊಡನೆ ಜೂಜಾಟಕ್ಕೆ ಕುಳಿತುಬಿಡುತ್ತಿದ್ದ.
ಗೂ, ತುಂಬಾ ಗಂಭೀರ ಮನುಷ್ಯ. ಅವನಿಗೆ ಹೊಸ ಹೊಸ ವಿಷಯಗಳನ್ನು ಓದಿ ತಿಳಿದುಕೊಳ್ಳುವ ಹುಚ್ಚು. ಅವನು ಕುರಿಗಳನ್ನು ಮೇಯಲು ಬಿಟ್ಟು ಪುಸ್ತಕ ಓದುತ್ತ ಕಾಲ ಕಳೆಯುತ್ತಿದ್ದ.
ಒಂದು ದಿನ ಝಾಂಗ್ ಗೆಳೆಯರೊಡನೆ ಜೂಜಾಟದಲ್ಲಿ ಮೈಮರೆತುಬಿಟ್ಟಿದ್ದ. ಅಂದು ಸಂಜೆ ಅವನ ಒಂದು ಕುರಿ ವಾಪಸ್ ಬರಲೇ ಇಲ್ಲ. ಎಲ್ಲೋ ದಾರಿ ತಪ್ಪಿಸಿಕೊಂಡುಬಿಟ್ಟಿತ್ತು.
ಅದೇ ದಿನ, ಗೂ ತನ್ನ ಬದುಕನ್ನು ಸುಧಾರಿಸುವ ಒಂದು ಒಳ್ಳೆಯ ಪುಸ್ತಕದ ಓದಿನಲ್ಲಿ ಮಗ್ನನಾಗಿಬಿಟ್ಟಿದ್ದ
ಅವನ ಒಂದು ಕುರಿಯೂ ವಾಪಸ್ ಬರಲೇ ಇಲ್ಲ.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)