ಹೇಗಾದರೂ ಸರಿ…. ಚಲನೆಯಲ್ಲಿರು : ಅರಳಿಮರ POSTER

“ಹಾರಲಾಗದೆ ಇದ್ದರೆ ಓಡು, ಓಡಲಾಗದೆ ಇದ್ದರೆ ನಡಿ; ನಡಿಯಲಾಗದೆ ಇದ್ದರೆ, ತೆವಳಿಕೊಂಡಾದರೂ ಸರಿ,.. ಒಟ್ಟಿನಲ್ಲಿ ಚಲನೆಯಲ್ಲಿರು” ಅನ್ನುತ್ತಾನೆ ಮಾರ್ಟಿನ್ ಲೂಥರ್ ಕಿಂಗ್

king

ನಾವು ಒಂದು ಬಾರಿ ಪ್ರಯಾಣಿಸಲು ಸಿದ್ಧವಾದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನಾವಾದರೂ ಸೋಮಾರಿಗಳು. ಅಥವಾ ನಮಗೆ ಕಂಫರ್ಟ್ ಝೋನ್’ನಿಂದ ಹೊರಗೆ ಬರಲು ಇಷ್ಟವಿರುವುದಿಲ್ಲ. ನಾವು ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಆದ್ದರಿಂದಲೇ ಪ್ರಯಾಣವನ್ನು ತಪ್ಪಿಸಿಕೊಳ್ಳಲು, ಚಲನೆಯನ್ನು ತಪ್ಪಿಸಿಕೊಳ್ಳಲು ನೂರೆಂಟು ನೆವ ಹುಡುಕುತ್ತೇವೆ.

ನಮಗೆ ಹಾರಲು ರೆಕ್ಕೆಯಿಲ್ಲವೆಂದು ಸಬೂಬು ಹೇಳುತ್ತೇವೆ. ರೆಕ್ಕೆಯಿಲ್ಲದೆ ಹೋದರೆ ನಡೆದುಕೊಂಡು ಪ್ರಯಾಣ ಮಾಡು ಎನ್ನಲಾಗುತ್ತದೆ. ಆಗ ನಾವು ನಡೆಯಲು ಕಾಲುಗಳಿಲ್ಲ ಎನ್ನುತ್ತೇವೆ. ಆಗ ತೆವಳಿಕೊಂಡಾದರೂ ಸರಿ, ಒಟ್ಟಿನಲ್ಲಿ ಚಲನೆಯಲ್ಲಿರು ಎನ್ನಲಾಗುತ್ತದೆ. 

ನಾವು ನಿಜಕ್ಕೂ ಜೀವನದಲ್ಲಿ ಪ್ರಗತಿಯನ್ನು ಬಯಸುವುದಾದರೆ, ಚಲನೆ ಅನಿವಾರ್ಯ. ಆದ್ದರಿಂದ, ತೆವಳಿಕೊಂಡಾದರೂ ಸರಿ, ಚಲಿಸುತ್ತಲೇ ಇರಬೇಕಾಗುತ್ತದೆ. ನೆವಗಳನ್ನೆಲ್ಲ ಕಟ್ಟಿಟ್ಟು ಮುಂದೆ ಸಾಗಬೇಕಾಗುತ್ತದೆ. 

Leave a Reply