ಅರವತ್ತನಾಲ್ಕು ವಿದ್ಯೆಗಳು | ಸನಾತನ ಸಾಹಿತ್ಯ ~ ಮೂಲಪಾಠಗಳು #32

ಪುರಾಣ ಕಥನಗಳಲ್ಲಿ, ಪ್ರಾಚೀನ ಸಾಹಿತ್ಯದಲ್ಲಿ 64 ವಿದ್ಯೆಗಳ ಉಲ್ಲೇಖ ನೋಡುತ್ತೇವೆ. ಈ 64 ವಿದ್ಯೆಗಳು ಯಾವುವು ಎಂದು ನೋಡೋಣ.

ಒಂದು ಪಠ್ಯದ ಪ್ರಕಾರ :
ಎಲ್ಲಾ ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳಲ್ಲಿ ಪ್ರಾವೀಣ್ಯ (4) +
ಆರು ಅಂಗಗಳಾದ ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪಗಳಲ್ಲಿ ಪರಿಣತಿ (6) +
ಆರು ಶಾಸ್ತ್ರಗಳಾದ ವೇದಾಂತ, ಧರ್ಮ, ಕಾವ್ಯ, ಶಿಲ್ಪ, ಕಾಮ ಮತ್ತು ಅಲಂಕಾರಗಳಲ್ಲಿ ನೈಪುಣ್ಯ (6) +
ಹದಿನೆಂಟು ಪುರಾಣಗಳಾದ ಬ್ರಾಹ್ಮ , ಪದ್ಮ , ವೈಷ್ಣವ, ಶೈವ, ಭಾಗವತ, ಭವಿಷ್ಯತ್, ನಾರದೀಯ, ಮಾರ್ಕಂಡೇಯ, ಆಗ್ನೇಯ, ಬ್ರಹ್ಮ ವೈವರ್ತ, ಲಿಂಗ, ವರಾಹ, ಸ್ಕಂದ, ವಾಮನ, ಕೂರ್ಮ, ಮತ್ಸ್ಯ, ಗರುಡ ಮತ್ತು ಬ್ರಹ್ಮಾಂಡ ಪುರಾಣಗಳನ್ನು ಕರಗತ ಮಾಡಿಕೊಂಡಿರುವುದು (18) +
ಹದಿನೆಂಟು ಸ್ಮೃತಿಗಳಾದ ಮನು, ಅತ್ರಿ, ವಿಷ್ಣು, ಹಾರೀತ, ಯಾಜ್ಞವಲ್ಕ್ಯ, ಉಶನ, ಅಂಗಿರ, ಯಮ, ಆಪಸ್ತಂಬ, ವಾತ್ಸ್ಯಾಯನ, ಬೃಹಸ್ಪತಿ, ಪರಾಶರ, ವ್ಯಸ¸, ಶಂಕಲಿಖಿತ, ದಕ್ಷ, ಗೌತಮ, ಶಾಂತಾತಪ, ವಸಿಷ್ಠ ಸ್ಮೃತಿಗಳ ಸಂಪೂರ್ಣ ತಿಳಿವಳಿಕೆ (18) +
ಹಾಗೂ
ಹನ್ನೆರಡು ವಿದ್ಯೆಗಳಾದ ಗಾಂಧರ್ವ, ವಿಶ್ವಕರ್ಮ, ಸೂದ, ಭೈಷಜ, ಕಾವ್ಯ, ನರ್ತನ, ನಾಟಕ, ಅಲಂಕಾರ, ಕೃತಕ, ಚೋರ, ಕಳ, ಮಹೇಂದ್ರ ವಿದ್ಯೆಗಳಲ್ಲಿ ಪಾರಂಗತರಾಗಿರುವುದು (12)
ಇವು ಒಟ್ಟು 64 ವಿದ್ಯೆಗಳು.  

ಪ್ರಾಚೀನ ಕನ್ನಡ ಪಠ್ಯಗಳಲ್ಲಿ, ಮುಖ್ಯವಾಗಿ ವಡ್ಡಾರಾಧನೆಯಲ್ಲಿ ವಿವರಿಸಲಾಗಿರುವ 64 ವಿದ್ಯೆಗಳು ಹೀಗಿವೆ:
1. ವೇದ,
2. ವೇದಾಂಗ,
3. ಇತಿಹಾಸ,
4. ಆಗಮ,
5. ನ್ಯಾಯ,
6. ಕಾವ್ಯ,
7. ಅಲಂಕಾರ,
8. ನಾಟಕ,
9. ಗಾನ,
10. ಕವಿತ್ವ,
11. ಕಾಮಶಾಸ್ತ್ರ,
12. ದೂತನೈಪುಣ್ಯ,
13. ದೇಶಭಾಷಾಜ್ಞಾನ,
14. ಲಿಪಿಕರ್ಮ,
15. ವಾಚನ,
16. ಸಮಸ್ತಾವಧಾನ,
17. ಸ್ವರಪರೀಕ್ಷಾ,
18. ಶಾಸ್ತ್ರಪರೀಕ್ಷಾ,
19. ಶಕುನಪರೀಕ್ಷಾ,
20. ಸಾಮುದ್ರಿಕ
21. ಪರೀಕ್ಷಾ,
22. ರತ್ನಪರೀಕ್ಷಾ,
23. ಸ್ವರ್ಣಪರೀಕ್ಷಾ,
24. ಗಜಲಕ್ಷಣ,
25. ಅಶ್ವಲಕ್ಷಣ,
26. ಮಲ್ಲವಿದ್ಯಾ,
27. ಪಾಕಕರ್ಮ,
28. ದೋಹಳ,
29. ಗಂಧವಾದ,
30. ಧಾತುವಾದ,
31. ಖನಿವಾದ,
32. ರಸವಾದ,
33. ಅಗ್ನಿಸ್ತಂಭ,
34. ಜಲಸ್ತಂಭ,
35. ವಾಯುಸ್ತಂಭ,
36. ಖಡ್ಗಸ್ತಂಭ,
37. ವಶ್ಯಾ,
38. ಆಕರ್ಷಣ,
39. ಮೋಹನ,
40. ವಿದ್ವೇಷಣ,
41. ಉಚ್ಛಾಟನ,
42. ಮಾರಣ,
43. ಕಾಲವಂಚನ,
44. ವಾಣಿಜ್ಯ,
45. ಪಶುಪಾಲನ,
46. ಕೃಷಿ,
47. ಸಮಶರ್ಮ,
48. ಲಾವುಕಯುದ್ಧ,
49. ಮೃಗಯಾ,
50. ಪುತಿಕೌಶಲ,
51. ದೃಶ್ಯಕರಣಿ – ದ್ಯೂತ ಕರಣಿ,
52. ಚಿತ್ರಲೋಹ,
53. ಪಾರ್ಷಾಮೃತ್,
54. ದಾರು ವೇಣು ಚರ್ಮ ಅಂಬರ ಕ್ರಿಯ,
55. ಚೌರ್ಯ,
56. ಔಷಧಸಿದ್ಧಿ, ಮಂತ್ರಸಿದ್ಧಿ,
57. ಸ್ವರವಂಚನಾ, ದೃಷ್ಟಿವಂಚನಾ,
58. ಅಂಜನ,
59. ಜಲಪ್ಲವನ,
60. ವಾಕ್ ಸಿದ್ಧಿ,
61. ಘಟಿಕಾಸಿದ್ಧಿ,
62. ಪಾದುಕಾಸಿದ್ಧಿ,
63. ಇಂದ್ರಜಾಲ
64. ಮಹೇಂದ್ರಜಾಲ

Leave a Reply