ಒಂದಲ್ಲ, ಎರಡೂ ಅಲ್ಲ ~ ಝೆನ್ ಸಂಭಾಷಣೆ

“ಭಗವಂತನೊಡನೆ ಒಂದಾಗೋದು ಹೇಗೆ?”
“ನಿನ್ನ ಈ ಬಯಕೆ ತೀವ್ರವಾಗುತ್ತಿದ್ದಂತೆಯೇ, ನಿನ್ನ ಮತ್ತು ಭಗವಂತನ ನಡುವಿನ ದೂರವೂ ಹೆಚ್ಚುತ್ತಾ ಹೋಗುತ್ತದೆ”

“ಮತ್ತೆ ಏನು ಮಾಡೋದು ಈ ದೂರವನ್ನು ?”
“ನಡುವೆ ದೂರ ಇಲ್ಲ ಅಂದುಕೋ”

“ಹಾಗಾದರೆ ಭಗವಂತ ಮತ್ತು ನಾನು ಒಂದೇ ಅಂದುಕೊಳ್ಳೋದಾ ?”
“ಒಂದಲ್ಲ, ಎರಡೂ ಅಲ್ಲ”

“ಅದು ಹೇಗೆ ಸಾಧ್ಯ ?”
“ಸೂರ್ಯ ಮತ್ತು ಬೆಳಕಿನಂತೆ
ಸಮುದ್ರ ಮತ್ತು ಅಲೆಗಳಂತೆ
ಹಾಡು ಮತ್ತು ಹಾಡುಗಾರನಂತೆ;
ಒಂದಲ್ಲ, ಎರಡೂ ಅಲ್ಲ.”

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

Leave a Reply