ಪ್ರಮುಖ ದರ್ಶನಗಳು | ಸನಾತನ ಸಾಹಿತ್ಯ ~ ಮೂಲಪಾಠಗಳು #33

ಸನಾತನ ಧರ್ಮದ ತತ್ತ್ವ ಸಿದ್ಧಾಂತಗಳನ್ನು ಸಾರುವ ದರ್ಶನಗಳ ಬಗ್ಗೆ ಪ್ರಾಥಮಿಕ ಮಾಹಿತಿ ಇಲ್ಲಿದೆ….

ನಾತನ ಧರ್ಮದ ತತ್ತ್ವಸಿದ್ಧಾಂತಗಳ ಕವಲುಗಳನ್ನು ದರ್ಶನಗಳೆಂದು ಕರೆಯಲಾಗುತ್ತದೆ. ಮೂಲತಃ ಒಂಭತ್ತು ಪ್ರಮುಖ ದರ್ಶನಗಳಿದ್ದು, ಅವುಗಳಲ್ಲಿ ಆರು ದರ್ಶನಗಳು ರೂಢಿಯಲ್ಲಿವೆ. ಇವನ್ನು ಒಟ್ಟಾಗಿ ‘ಷಡ್ ದರ್ಶನಗಳು’ ಎಂದು ಕರೆಯಲಾಗುತ್ತದೆ.

ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ (ಉತ್ತರ ಮೀಮಾಂಸ) , ವೇದಾಂತ, ಜೈನ, ಬೌದ್ಧ, ಚಾರ್ವಾಕ, ಇವು ಒಂಭತ್ತು ಪ್ರಮುಖ ದರ್ಶನಗಳು.

ಅವುಗಳಲ್ಲಿ ಜೈನ, ಬೌದ್ಧ, ಚಾರ್ವಾಕ ದರ್ಶನಗಳನ್ನು ಹೊರತು ಪಡಿಸಿ ಷಡ್’ದರ್ಶನಗಳು ಚಾಲ್ತಿಯಲ್ಲಿವೆ. ಬಹುಶಃ, ನಂತರದಲ್ಲಿ ಜೈನ ಮತ್ತು ಬೌದ್ಧ ದರ್ಶನಗಳು ಪ್ರತ್ಯೇಕ ಧಾರ್ಮಿಕ ಅಸ್ಮಿತೆಯನ್ನು ಪಡೆದಿದ್ದರಿಂದಲೂ; ಚಾರ್ವಾಕ ದರ್ಶನವು ನಾಸ್ತಿಕ ದರ್ಶನವಾಗಿದ್ದು, ಅದರ ದರ್ಶನಸೂತ್ರಗಳು ನಷ್ಟವಾಘಿರುವುದರಿಂದಲೂ ಪ್ರಮುಖ ದರ್ಶನಗಳಿಂದ ಪ್ರತ್ಯೇಕಗೊಂಡಿರಬಹುದು.

ಸಾಮಾನ್ಯವಾಗಿ ದೇವರನ್ನು ನಂಬದೆ ಇರುವುದು ನಾಸ್ತಿಕತೆ ಎಂಬ ನಂಬಿಕೆ ರೂಢಿಯಲ್ಲಿದೆ. ಆದರೆ ಸನಾತನ ಧರ್ಮವು ವೇದಪ್ರಮಾಣವನ್ನು ಒಪ್ಪುವವರನ್ನು ಆಸ್ತಿಕರೆಂದೂ ಅದನ್ನು ಒಪ್ಪದವರನ್ನು ನಾಸ್ತಿಕರೆಂದೂ ಕರೆಯುತ್ತದೆ. ಆದ್ದರಿಂದ ಅವೈದಿಕ ದರ್ಶನಗಳಾದ ಬೌದ್ಧ ಹಾಗೂ ಜೈನ ದರ್ಶನಗಳು ಸನಾತನ ಧರ್ಮದ ಪಾಲಿಗೆ ನಾಸ್ತಿಕ ದರ್ಶನಗಳಾಗಿವೆ.    

ಸಾಂಖ್ಯ, ನ್ಯಾಯ ಮತ್ತು ಮೀಮಾಂಸ ದರ್ಶನಗಳು ವೇದಗಳನ್ನು ಒಪ್ಪುತ್ತವೆ; ಆದರೆ ದೇವರು ಅಥವಾ ಜಗನ್ನಿಯಾಮಕನನ್ನು ಒಪ್ಪುವುದಿಲ್ಲ. ಆದ್ದರಿಂದ ಇವು ಆಸ್ತಿಕ ದರ್ಶನಗಳೇ ಆಗಿದ್ದರೂ ನಿರೀಶ್ವರ ದರ್ಶನಗಳೆಂದು ಕರೆಯಲ್ಪಡುತ್ತವೆ.

ಯೋಗ, ವೈಶೇಷಿಕ, ವೇದಾಂತ, ವೇದಗಳು ಜಗನ್ನಿಯಾಮಕನ ಅಸ್ತಿತ್ವವನ್ನು ಒಪ್ಪುತ್ತವೆ. ಆದ್ದರಿಂದ ಇವು ಸ-ಈಶ್ವರ ದರ್ಶನಗಳಾಗಿವೆ.

ಯೋಗ ದರ್ಶನಕ್ಕೆ ಪಾತಂಜಲಿಯ ಯೋಗಸೂತ್ರ, ಮೀಮಾಂಸಕ್ಕೆ ಜೈಮಿನಿಯ ಧರ್ಮಸೂತ್ರ, ವೇದಾಂತಕ್ಕೆ ಬಾದರಾಯಣ ಬ್ರಹ್ಮಸೂತ್ರ, ನ್ಯಾಯಕ್ಕೆ ಗೌತಮರ ನ್ಯಾಯಸೂತ್ರ, ವೈಶೇಷಿಕಕ್ಕೆ ಕಣಾದಸೂತ್ರ ಹಾಗೂ ಸಾಂಖ್ಯಕ್ಕೆ ಸಾಂಖ್ಯಕಾರಿಕೆಗಳು ಪ್ರವೇಶ ಪರಿಚಯ ನೀಡುತ್ತವೆ.

Leave a Reply