ಬ್ರೂಸ್ ಲೀ ಹೇಳಿದ್ದು : ಅರಳಿಮರ POSTER

“ನಾನು ಹತ್ತು ಸಾವಿರ ಹೊಡೆತಗಳನ್ನು ಒಂದೇ ಬಾರಿ ಅಭ್ಯಾಸ ಮಾಡಿದ ವ್ಯಕ್ತಿಗೆ ಭಯಪಡುವುದಿಲ್ಲ. ಆದರೆ ಒಂದೇ ಹೊಡೆತವನ್ನು ಹತ್ತು ಸಾವಿರ ಬಾರಿ ಅಭ್ಯಾಸ ಮಾಡಿದ ವ್ಯಕ್ತಗೆ ಭಯಪಡುತ್ತೇನೆ” ಅನ್ನುತ್ತಾನೆ ಬ್ರೂಸ್ ಲೀ

bruslee

ತತ್ತ್ವಜ್ಞಾನಿಯೂ ಸಮರಕಲಾ ನಿಪುಣನೂ ಆಗಿದ್ದ ಬ್ರೂಸ್ ಲೀಯ ಈ ಹೇಳಿಕೆ ಪರ್ಫೆಕ್ಷನ್ – ನಿಖರತೆಯ ಮಹತ್ವವನ್ನು ಸೂಚಿಸುತ್ತದೆ. 

ಒಂದೇ ಸಲಕ್ಕೆ ಹತ್ತು ಹಲವು ಸಂಗತಿಗಳನ್ನು ಕಲಿಯಲು ತೊಡಗಿದರೆ ನಾವು ಯಾವುದನ್ನೂ ನಿಖರವಾಗಿ ಕಲಿಯುವುದು ಸಾಧ್ಯವಿಲ್ಲ. ಆದರೆ, ಒಂದು ಸಂಗತಿಯನ್ನು ಹತ್ತಾರು ಬಾರಿ ಅಭ್ಯಾಸ ಮಾಡುವ ಮೂಲಕ ಕಲಿತುಕೊಂಡರೆ ಆ ಸಂಗತಿ ನಮಗೆ ಕರಗತವಾಗುತ್ತದೆ. ನಾವು ಅದರ ಮೇಲೆ ಹಿಡಿತ ಸಾಧಿಸುತ್ತೇವೆ. 

ಮಾರ್ಷಲ್ ಆರ್ಟ್ಸ್’ನಲ್ಲಿ ಸಿದ್ಧಹಸ್ತನಾಗಿದ್ದ ಬ್ರೂಸ್ ಲೀ, “ತಾನು ಒಂದೇ ಹೊಡೆತವನ್ನು ಹತ್ತು ಸಾವಿರ ಬಾರಿ ಅಭ್ಯಾಸ ಮಾಡಿದವರಿಗೆ ಭಯ ಪಡುತ್ತೇನೆ” ಎಂದು ಹೇಳಿರುವುದು ಇದೇ ಕಾರಣಕ್ಕೆ. ಅಭ್ಯಾಸವು ಯಾವುದೇ ವ್ಯಕ್ತಿಯನ್ನು ನಿಖರತೆಯೆಡೆಗ ಕೊಂಡೊಯ್ಯುತ್ತದೆ. ನಿರ್ದಿಷ್ಟ ವಿಷಯದ ಕಲಿಕೆಯಲ್ಲಿ ಪರಿಪೂರ್ಣರನ್ನಾಗಿ ಮಾಡುತ್ತದೆ.  ಅವರನ್ನು ನಾವು ಎದುರಿಸಬೇಕೆಂದರೆ, ನಾವು ಕೂಡಾ ಸತತ ಅಭ್ಯಾಸದಿಂದ ಸಿದ್ಧತೆ ನಡೆಸುವ ಅಗತ್ಯವಿರುತ್ತದೆ. 

ಆದ್ದರಿಂದ, ಒಂದೇ ಸಲಕ್ಕೆ ವಿವಿಧ ಸಂಗತಿಗಳಲ್ಲಿ ತೊಡಗೆ ಎಲ್ಲವನ್ನೂ ಅರೆಬರೆ ತಿಳಿಯುವುದಕ್ಕಿಂತ, ಒಂದು ವಿಷಯದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡರೆ ಗೆಲುವು ಸುಲಭವಾಗುತ್ತದೆ. – ಇದು ಬ್ರೂಸ್ ಲೀ ಮಾತಿನ ವಿಸ್ತೃತಾರ್ಥ. 

Leave a Reply