ಸನಾಯಿ ಹೀಗೆ ಹೇಳಿದ…. : ಅರಳಿಮರ POSTER

“ಜಗತ್ತಿನಲ್ಲಿ ಎಷ್ಟೆಲ್ಲ ಸಾಮ್ರಾಟರಿದ್ದರೋ ಅವರೆಲ್ಲ ಇಟ್ಟಿಗೆ – ಮಣ್ಣಿನ ರಾಶಿಯಡಿಯಲ್ಲಿ ಹೂತು ಹೋಗಿದ್ದಾರೆ. ಹಾಗಿದ್ದೂ ಅವನು ಅರಸ, ಇವನು ಗುಲಾಮನೆಂದು ಭೇದವೇಕೆ ಮಾಡುವುದು? ಎಲ್ಲರನ್ನೂ ಸಮಾನವಾಗಿ ಪ್ರೀತಿಸು” ಅನ್ನುತ್ತಾನೆ  ಸನಾಯಿ ಘಜ್ನವಿ.  

sanai1

ನಾವು ಪ್ರೇಮದಲ್ಲೂ ತಾರತಮ್ಯ ಮಾಡುತ್ತೇವೆ. ಪ್ರೇಮದಲ್ಲಿ ಅಂದರೆ, ಭಾವಿಸಲ್ಪಟ್ಟ ಪ್ರೇಮದಲ್ಲಿ. ಯಾವುದು ವಾಸ್ತವದಲ್ಲಿ ಪ್ರೇಮವೋ ಅಲ್ಲಿ ತರತಮಕ್ಕೆ ಅವಕಾಶವೇ ಇರುವುದಿಲ್ಲ. ಆದ್ದರಿಂದ ನಮ್ಮ ವ್ಯಾವಹಾರಿಕ ಅರ್ಥದ ಪ್ರೇಮದಲ್ಲಿ ನಾವು ತಾರತಮ್ಯ ತೋರುತ್ತೇವೆ. ಶ್ರೀಮಂತರನ್ನು, ಸುಂದರವಾಗಿರುವವರನ್ನು, ಬುದ್ಧಿವಂತರನ್ನು ಇತ್ಯಾದಿ ಹಲವು ಮಾನದಂಡಗಳ ಮೂಲಕ ನಮ್ಮ ಪ್ರೀತಿಯನ್ನು ಬೆಳೆಸಿಕೊಳ್ಳುತ್ತೇವೆ. 

ಸೂಫಿ ಕವಿ ಸನಾಯಿ ಕೇಳುತ್ತಾನೆ, “ಎಂತೆಂಥಾ ಸಾಮ್ರಾಟರೂ ಸತ್ತು ಎಲ್ಲರಂತೆ ಮಣ್ಣಾಗಿಹೋಗಿದ್ದಾರೆ. ಪ್ರೀತಿಯಲ್ಲೇಕೆ ಅವನು ರಾಜ, ಇವನು ಗುಲಾಮ ಎಂದು ಭೇದ ಮಾಡುತ್ತೀರಿ?”

ಎಲ್ಲರೂ ಸತ್ತ ಮೇಲೆ ಮಣ್ಣಾಗುವವರೇ. ಎಲ್ಲರೂ ಒಂದೇ ಮೂಲದಿಂದ ಬರುತ್ತಾರೆ, ಒಂದೇ ಅಂತ್ಯಕ್ಕೆ ತೆರಳುತ್ತಾರೆ. ನಡುವಿನ ಹುದ್ದೆ, ಹೆಸರು, ಬುದ್ಧಿ, ಸೌಂದರ್ಯಗಳಿಂದ ನಿಮ್ಮ ಪ್ರೇಮವನ್ನು ಹೇಗೆ ನಿಗದಿ ಮಾಡುತ್ತೀರಿ? 

ಆದ್ದರಿಂದ, ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಸುಮ್ಮನೆ ಪ್ರೀತಿಸಿ. ಆಗ ನೀವೂ ಎಲ್ಲರಿಂದ ಸಮಾನವಾಗಿ ಪ್ರೀತಿಸಲ್ಪಡುತ್ತೀರಿ. ಪ್ರೀತಿಯಲ್ಲೂ ನಿಮಗೆ ಪ್ರತಿಫಲ ಸಿಗಲೇಬೇಕು ಎಂದಾದರೆ, ಪ್ರೀತಿಯೇ ಪ್ರತಿಫಲವಾಗಿ ನಿಮಗೆ ಸಿಗುತ್ತದೆ. ಆದ್ದರಿಂದ ಪ್ರೀತಿಸಿ… – ಇದು ಸನಾಯಿಯ ಮಾತಿನ ಒಟ್ಟು ಅರ್ಥ. 

 

Leave a Reply