ಬುದ್ಧ ಇರುವಲ್ಲಿ ಒಂದು ಕ್ಷಣವೂ ಇರಬೇಡ! ~ ಝೆನ್ ಬೋಧನೆ

ನ್ಯಾಸಿಯೊಬ್ಬ ವಿದಾಯ ಹೇಳಲು ಮಾಸ್ಟರ್ ಜೋಶೋ ಹತ್ತಿರ ಬಂದ.

ಮುಂದೆ ಎಲ್ಲಿ ಹೋಗಬೇಕು ಅಂತ ನಿರ್ಧರಿಸಿದ್ದೀಯ?
ಜೋಶೋ ಪ್ರಶ್ನೆ ಮಾಡಿದ.

ಬೌದ್ಧ ಧರ್ಮ ಕಲಿಯಲು ಜಗತ್ತಿನ ಮೂಲೆ ಮೂಲೆಗೂ ಹೋಗುತ್ತಿದ್ದೇನೆ ಮಾಸ್ಟರ್.

ಜೋಶೋ, ಸನ್ಯಾಸಿಯ ಕುತ್ತಿಗೆ ಪಟ್ಟಿ ಹಿಡಿದ.
ಬುದ್ಧ ಇರುವಲ್ಲಿ ಒಂದು ಕ್ಷಣವೂ ಇರಬೇಡ,
ಬುದ್ಧ ಇರದ ಜಾಗವನ್ನು ಮಿಂಚಿನಂತೆ ದಾಟಿ ಹೋಗು।
ಸುತ್ತಲಿನ ಮೂರು ಸಾವಿರ ಮೈಲಿ ಜಾಗದಲ್ಲಿ
ಬೌದ್ದ ಧರ್ಮ ದ ಬಗ್ಗೆ ಯಾರೊಡನೆಯೂ ಮಾತಾಡುವ ತಪ್ಪು ಮಾಡಬೇಡ.

ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

Leave a Reply