ಬೋಧಿಧರ್ಮ ಹೇಳಿದ್ದು : ಅರಳಿಮರ POSTER

“ನಿಮ್ಮ ಸ್ವಭಾವವನ್ನು ನೀವು ಅರಿತುಕೊಳ್ಳುವವರೆಗೆ ಈ ಕಾರ್ಯ – ಕಾರಣಗಳೆಲ್ಲವೂ ಶುದ್ಧ ಮೂರ್ಖತನವೇ!” ಅನ್ನುತ್ತಾನೆ ಬೋಧಿಧರ್ಮ. 

bodhi

ಹುತೇಕವಾಗಿ ನಾವೆಲ್ಲರೂ ಒಂದು ತಪ್ಪು ಮಾಡುತ್ತೇವೆ. ನಮ್ಮ ಬದುಕಿನ ಸುಖದುಃಖಗಳಿಗೆ ಕಾರಣವನ್ನು ಮತ್ತೆಲ್ಲೋ ಹುಡುಕುತ್ತೇವೆ. ನಾವು ಎದುರಿಸುವ ಪರಿಣಾಮಗಳನ್ನು ಕಾರ್ಯ ಕಾರಣಗಳ ಮೇಲೆ ಹೊರಿಸಿ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತೇವೆ. 

ಹೀಗೆ ಮಾಡುವ ಮೂಲಕ ನಮ್ಮಕಣ್ಣಿಗೆ ನಾವೇ ಪಟ್ಟಿ ಕಟ್ಟಿಕೊಳ್ಳುವ ಮೂರ್ಖತನ ಮಾಡುತ್ತೇವೆ. ಕಾರ್ಯ ಕಾರಣಗಳ ಮೇಲೆ ಎಲ್ಲವನ್ನೂ ಹೊರಿಸುವುದರಿಂದ ನಮ್ಮ ತಪ್ಪುಗಳು ಮಾತ್ರವಲ್ಲ, ಸರಿಯಾದ ಹೆಜ್ಜೆಗಳೂ ನಮಗೆ ಗೋಚರವಾಗುವುದಿಲ್ಲ. ಆದ್ದರಿಂದಲೇ ಬೋಧಿಧರ್ಮ ಈ ಮೇಲಿನ ಮಾತುಗಳನ್ನು ಹೇಳಿರುವುದು.

ನಮ್ಮ ಸ್ವಭಾವವನ್ನು ನಾವು ಅರಿತುಕೊಂಡರೆ, ನಾವು ಎದುರಿಸುತ್ತಿರುವ ಪರಿಣಾಮಗಳಿಗೆ ಪರಿಹಾರವನ್ನೂ ನಾವೇ ಕಂಡುಕೊಳ್ಳಬಹುದು. ಅದರ ಬದಲು ಕಾರ್ಯ, ಕಾರಣ ಎಂದೆಲ್ಲ ನೆವ ಹೇಳುವುದು ಪಲಾಯನವಾದ ಮಾತ್ರವಲ್ಲ, ಶುದ್ಧ ಮೂರ್ಖತನ ಅನ್ನೋದು ಬೋಧಿಧರ್ಮನ ಮಾತುಗಳ ವಿಸ್ತೃತಾರ್ಥ. 

Leave a Reply