ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

taoಸಂಪ್ರದಾಯವೊಂದು
ಅವನತಿಯ ಹಾದಿ ಹಿಡಿದಾಗ
ಕರುಣೆ ಮತ್ತು ನೈತಿಕತೆ ಹುಟ್ಟಿಕೊಳ್ಳುತ್ತವೆ.

ಕಲಿಕೆ ಮತ್ತು ಜಾಗರೂಕತೆ
ಮೇರೆ ಮೀರುತ್ತಿದ್ದಂತೆಯೇ
ಬೂಟಾಟಿಕೆ ಹುಟ್ಟಿಕೊಳ್ಳುತ್ತದೆ.

ಒಡೆದ ಮನೆಯಲ್ಲಿ
ಮಕ್ಕಳು ಮತ್ತು ತಂದೆ ತಾಯಂದಿರು
ಕರ್ತವ್ಯಪರಾಯಣರು.

ಛಿದ್ರಗೊಂಡ ಸಮಾಜದ ತುಂಬ
ನಂಬಿಕಸ್ತ ಭಕ್ತರ
ಮೆರವಣಿಗೆ, ಉರವಣಿಗೆ.

Leave a Reply