ನಿಜವಾದ ಮಹಾಶೂನ್ಯ ~ ಒಂದು ಝೆನ್ ಕಥೆ

ರದ ಕೆಳಗೆ ಧ್ಯಾನ ನಿರತನಾಗಿದ್ದ ಸುಭೂತಿ ಎಂಬ ಬಿಕ್ಖುವಿಗೆ ಜ್ಞಾನೋದಯವಾಯಿತು.

ಆತ ಮಹಾವೃಕ್ಷದ ಕೆಳಗೆ ಹಾಗೇ ಕುಳಿತುಕೊಂಡಿದ್ದ. ಕಣ್ಣುಗಳಲ್ಲಿ ಕಾಂತಿ ಸೂಸುತ್ತಿತ್ತು. ಮುಖದಲ್ಲಿ ನೆಮ್ಮದಿ ನೆಲೆಸಿತ್ತು. ಕಿವಿಯ ಬಳಿ ಮೆಲು ದನಿಯೊಂದು “ಮಹಾಶೂನ್ಯದ ಬಗೆಗೆ ನಿನ್ನ ತಿಳಿವು ಅಮೋಘ” ಎಂದು ಪಿಸುಗುಡುತ್ತಿತ್ತು.

ಸುಭೂತಿಗೆ ಅಚ್ಚರಿ, “ಅರೆ! ನಾನು ಮಹಾಶೂನ್ಯದ ಬಗ್ಗೆ ಮಾತೇ ಆಡಿಲ್ಲವಲ್ಲ!!”

“ನೀನು ಮಾತಾಡಲೂ ಇಲ್ಲ, ನಾವು ಕೇಳಲೂ ಇಲ್ಲ. ಅದೇ ನಿಜವಾದ ಮಹಾಶೂನ್ಯ!” ಕಿವಿಬಳಿಯ ಪಿಸುದನಿ ಉತ್ತರಿಸಿತು.

ಮರದ ಟೊಂಗೆಗಳು ಸುಭೂತಿಯ ಮೇಲೆ ಹೂವಿನ ಮಳೆಗರೆದವು.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply