ಏನೂ ಮಾಡದಿರುವುದು ಮುಗಿಯುವುದೇ ಇಲ್ಲ! ~ ಝೆನ್ ಸಂಭಾಷಣೆ

ಒಬ್ಬ ಸದ್ಗ್ರಹಸ್ಥ, ಝೆನ್ ಮಾಸ್ಟರ್ ನ ಆಶ್ರಮಕ್ಕೆ ಬಂದು ಅವನನ್ನು ತನ್ನ ಹೊಸ ಮನೆಯ ಕಾರ್ಯಕ್ರಮ ಒಂದಕ್ಕೆ ಆಹ್ವಾನಿಸಿದ.

ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ
ಗ್ರಹಸ್ಥ : ಏನು ಕೆಲಸ ಮಾಡುತ್ತಿದ್ದೀರಿ? ನನ್ನ ಸಹಾಯ ಏನಾದರೂ ಬೇಕೆ?
ಮಾಸ್ಟರ್ : ಏನೂ ಮಾಡುತ್ತಿಲ್ಲ. ಏನೂ ಮಾಡದಿರುವುದೇ ಝೆನ್ ಸನ್ಯಾಸಿಯ ಮುಖ್ಯ ಕೆಲಸ

ಸ್ವಲ್ಪ ದಿನಗಳ ನಂತರ ಮತ್ತೆ ಆ ಗ್ರಹಸ್ಥ, ಮಾಸ್ಟರ್ ನನ್ನು ತನ್ನ ಮನೆಗೆ ಆಹ್ವಾನಿಸಿದ.
ಮಾಸ್ಟರ್ : ನನಗೆ ಬಿಡುವಿಲ್ಲ, ಬರಲು ಆಗುವುದಿಲ್ಲ 
ಗ್ರಹಸ್ಥ : ಈಗ ಏನು ಮಾಡುತ್ತಿದ್ದೀರಿ?
ಮಾಸ್ಟರ್: ಏನೂ ಮಾಡುತ್ತಿಲ್ಲ
ಗ್ರಹಸ್ಥ : ಆವತ್ತೂ ನೀವು ಅದನ್ನೇ ಮಾಡುತ್ತಿದ್ದಿರಿ, ಅಲ್ಲವೆ?
ಮಾಸ್ಟರ್ : ಹೌದು, ಅದು ಇನ್ನೂ ಮುಗಿದಿಲ್ಲ.

(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)

Leave a Reply