ಕಾಮ : ಮಿತಿಯಲ್ಲಿದ್ದರೆ ಉನ್ನತಿ, ಅತಿಯಾದರೆ ಅವನತಿ

ಮನದಲ್ಲಿ ನಿರಂತರವಾಗಿ ಕಾಮ ವಿಲಾಸದ ಚಿತ್ರಗಳ ಕಲ್ಪನೆಯಲ್ಲೇ ಮುಳುಗಿದ್ದರೆ ಅದು ಕಾಮವೆನಿಸುವುದಿಲ್ಲ, ರೋಗವೆನಿಸುತ್ತದೆ. ಹಸಿವು ಬಾಯಾರಿಕೆಯಂತೆ ಕಾಮವೂ ಕೂಡ ಒಂದು ಸಹಜ ಸಂವೇದನೆ. ಹಸಿದಾಗ ಊಟ ಮಾಡುತ್ತೇವೆ ಮಿತಿಮೀರಿ ಯಾವಾಗಲೂ ಹಸಿವಾಗುತ್ತಿಲ್ಲೇ ಇದ್ದರೆ ಅದನ್ನು ರೋಗವೇನ್ನಬೇಕಾಗುತ್ತದೆ. ಇದರಂತೆಯೇ ಯಾವಾಗಲೂ ಕಾಮದ ವಿಲಾಸದ ಕಲ್ಪನೆಯಲ್ಲೇ ಮುಳುಗಿದ್ದರೆ, ಅದು ರೋಗವೆನಿಸುತ್ತದೆ  ~ ಅಪ್ರಮೇಯ

ಸಿವು, ನಿದ್ರೆ, ಬಾಯಾರಿಕೆ ಭಯದಂತೆ ಕಾಮವೂ ಕೊಡ ಮಾನವನ ಸ್ವಾಭಾವಿಕ ಸಹಜ ಸಂವೇದನೆ. ಈ ಸಂವೇದನೆಗಳು ಎಲ್ಲಾ ಪ್ರಾಣಿಪಕ್ಷಿಗಳಿಗೂ ಇರತಕ್ಕವುಗಳೇ. ಅವು ಈ ಸಂವೇದನೆಗಳನ್ನು ನಿರ್ಲಕ್ಷಿಸಿ ತೃಪ್ತಿಯಿಂದ ಬದುಕಲಾರವು. ಮಾನವ ಪ್ರಕೃತಿಯ ಪರಿದಿಯಲ್ಲಿರುವುದರಿಂದ ಅದಕ್ಕೆ ವಿರುದ್ಧವಾದದ್ದು ಅಡ್ಡದಾರಿ ಎನಿಸುತ್ತದೆ. 

ಲೈಂಗಿಕತೆಯನ್ನು ಪ್ರಾಣಿಪಕ್ಷಿಗಳೂ ಹೊಂದುತ್ತವೆ ಮಾನವನೂ ಹೊಂದುತ್ತಾನೆ ಆದರೆ ಮಾನವನಿಗೂ ಪ್ರಾಣಿಪಕ್ಷಿಗಳಿಗೂ ಇರುವ ಮುಖ್ಯ ವ್ಯತ್ಯಾಸ ಮಾನವನಿಗಿರುವ ವಿವೇಚನಾ ಶಕ್ತಿ ಯಾವುದನ್ನು ಹೇಗೆ ಮಾಡಬೇಕು ಎನ್ನುವ ಜ್ಞಾನ. ಶರೀರಧರ್ಮಶಾಸ್ತ್ರ ಗಳಂತೆ ಕಾಮದ ಜ್ಞಾನ ನೀಡಲು ಹಾಗೂ ಯೋಗ್ಯ ನಿಬಂಧನೆಗಾಗಿ ಕಾಮಶಾಸ್ತ್ರ ಹುಟ್ಟಿತು.
ಪಶುಗಳು ಮನದಲ್ಲಿ ಕಾಮ ಹುಟ್ಟಿದ ತಕ್ಷಣ ಕಾಲ, ಸ್ಥಳ , ಮಿತಿ, ರೀತಿಗಲಿಲ್ಲದೆ ತಮ್ಮ ಕಾಮ ತೃಪ್ತಿಯನ್ನು ಹೊಂದುತ್ತವೆ ಆದರೆ ಮಾನವ ಹಾಗಲ್ಲ ಅವನಿಗೆ ಕಾಲ, ಸ್ಥಳ, ರೀತಿಗಳ ಅರಿವಿರಬೇಕಾಗುತ್ತದೆ ಇದನ್ನೇ ಕಾಮಶಾಸ್ತ್ರ ತಿಳಿಸಿಕೊಡುತ್ತದೆ.

ಮನದಲ್ಲಿ ನಿರಂತರವಾಗಿ ಕಾಮ ವಿಲಾಸದ ಚಿತ್ರಗಳ ಕಲ್ಪನೆಯಲ್ಲೇ ಮುಳುಗಿದ್ದರೆ ಅದು ಕಾಮವೆನಿಸುವುದಿಲ್ಲ, ರೋಗವೆನಿಸುತ್ತದೆ.
ಹಸಿವು ಬಾಯಾರಿಕೆಯಂತೆ ಕಾಮವೂ ಕೂಡ ಒಂದು ಸಹಜ ಸಂವೇದನೆ. ಹಸಿದಾಗ ಊಟ ಮಾಡುತ್ತೇವೆ ಮಿತಿಮೀರಿ ಯಾವಾಗಲೂ ಹಸಿವಾಗುತ್ತಿಲ್ಲೇ ಇದ್ದರೆ ಅದನ್ನು ರೋಗವೇನ್ನಬೇಕಾಗುತ್ತದೆ. ಇದರಂತೆಯೇ ಯಾವಾಗಲೂ ಕಾಮದ ವಿಲಾಸದ ಕಲ್ಪನೆಯಲ್ಲೇ ಮುಳುಗಿದ್ದರೆ, ಅದು ರೋಗವೆನಿಸುತ್ತದೆ.

ದೇಗುಲಗಳಲ್ಲಿ ಮಿಥುನ ಶಿಲ್ಪಗಳೇಕೆ?
ಲೈಂಗಿಕ ಶಿಕ್ಷಣವನ್ನು ಸುಲಭವಾಗಿ ಅರ್ಥೈಸಲು ಚಿತ್ರಗಳ ಸಹಾಯ ಬೇಕಾಗುತ್ತವೆ, ಹಾಗಾಗಿ ದೇವಸ್ಥಾನಗಳ ಮೇಲಿನ ಶಿಲ್ಪಕಲೆಗಳ ಕೆತ್ತಿರಬಹುದು ಎನ್ನುವುದು ಒಂದು ವಾದ. 
ದೇವಸ್ಥಾನದ ಹೋರಗಿನ ಗೋಡೆಗಳ ಮೇಲೆ ಮೈಥುನದ ಶಿಲ್ಪಕಲೆಗಳನ್ನು ನೋಡುತ್ತೇವೆ ಅದರಿಂದ ನಮಗೆ ಕಾಮೋದ್ರೇಕವಾಗಬಹುದು ಆದರೆ ಒಳಗೆ ಪ್ರವೇಶಿಸಿ ದೇವರ ಮುಂದೆ ನಿಂತಾಗಲೂ ಅವನ ಮನಸ್ಸು ಆ ಕಾಮ ವಿಲಾಸದ ಚಿತ್ರದ ಕಡೆಯಲ್ಲೇ ವಾಲುತ್ತಿದ್ದರೆ ಅದು ಅವನ ಭಕ್ತಿಯ ಸಾಮರ್ಥ್ಯ ಹಾಗೂ ಇಂದ್ರಿಯಗಳ ಮೇಲಿನ ಅವನ ನಿಯಂತ್ರಣವನ್ನು ತೋರಿಸುತ್ತದೆ. ಇದನ್ನೆಲ್ಲಾ ಮೋಕ್ಷವೆಂಬ ಅದ್ವೈತ ಸ್ಥಿತಿಗೇರಲು ಅವಶ್ಯಕವಾದ ಇಂದ್ರಿಯಗಳ ಮೇಲಿನ ನಮ್ಮ ನಿಯಂತ್ರಣವನ್ನು ಅಳೆಯಲು ಮಾಡಿದ ಉಪಾಯಗಳು ಎನ್ನಬಹುದು. 
ಒಟ್ಟಾರೆಯಾಗಿ, “ಮೈಥುನ ಶಿಲೆಗಳ ಮೂಲ ಆಶಯ ಒಬ್ಬ ವ್ಯಕ್ತಿಯ ಭಕ್ತಿಯ ಸಾಮರ್ಥವನ್ನು ತಿಳಿಯುವುದು ಹಾಗೂ ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದಾಗಿತ್ತು” ಎನ್ನುವ ಮಾತು ಹೆಚ್ಚು ಸಮಂಜಸವಾಗಿ ತೋರುತ್ತದೆ. 

ಯಾವುದು ಶ್ರೇಷ್ಠ?
ಒಮ್ಮೆ ಧರ್ಮ-ಅರ್ಥ-ಕಾಮ-ಮೋಕ್ಷ ಇವು ನಾಲ್ಕರಲ್ಲಿ ಯಾವುದು ಶ್ರೇಷ್ಠ ಎಂದು ಚರ್ಚೆ ನಡೆಯಿತು ಆಗ ಭೀಮ ಧರ್ಮ, ಅರ್ಥಗಳಿಗಿಂತ ಕಾಮವೇ ದೊಡ್ಡದು ಎಂದು ಹೇಳುತ್ತಾನೆ.
ಏಕೆಂದರೆ ಈ ಜಗತ್ತು ನಿಂತಿರುವುದೇ ಕಾಮದ ಮೇಲೆ, ಇಲ್ಲಿ ಕಾಮಕ್ಕೆ ಲೈಂಗಿಕತೆಯನ್ನು ಎಂಬ ಸೀಮಿತ ಅರ್ಥವಲ್ಲದೆ ಬಯಕೆ ಎಂಬ ವಿಶಾಲ ಅರ್ಥವನ್ನು ಕಲ್ಪಿಸಲಾಗಿದೆ, ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ.

ಕಾಮವು ಉನ್ನತಿಗೆ ಕಾರಣವಾಗುತ್ತದೆ, ಮೋಕ್ಷಕ್ಕೆ ಪ್ರೇರಕವಾಗುತ್ತದೆ.
ಇದನ್ನು ಸಾರುವ ಅಥರ್ವವೇದದ ಮಂತ್ರವೊಂದು ಹೀಗೆ ಹೇಳುತ್ತದೆ.
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
“ಎಲೈ ಕಾಮವೇ! ಮಂಗಳಕರವೂ, ಕಲ್ಯಾಣಕಾರಿಯೂ, ಸತ್ಯದ ದರ್ಶನಕ್ಕೆ ಕಾರಣವಾಗುವ ನಿನ್ನ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ನಿನ್ನ ಪಾಪದ ಕೆಟ್ಟ ರೂಪಗಳನ್ನು ಬೇರೆಡೆ ಬಿಟ್ಟುಬಿಡು!!”

ಇಂಥಾ ಅಭ್ಯುದಯೀ ಕಾಮವನ್ನು ವಿಕೃತಿಯ ಮಟ್ಟಕ್ಕೆ ಇಳಿಸಿರುವ ನಾವು…. ಮಾನವ ಜೀವಿಗಳು, ಈ ಕಾರಣದಿಂದಲೇ ಉಳಿದ ಮೂರು ಪುರುಷಾರ್ಥಗಳನ್ನು ಸಾಧಿಸಿಯೂ ಪರಿಪೂರ್ಣತೆ ಸಾಧಿಸಲಾಗದೆ, ವಿಕಸನದ ಪೂರ್ಣ ಹಂತವನ್ನು ತಲುಪಲಾಗದೆ ಉಳಿದಿದ್ದೇವೆ. 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ಮಿತಿಯಲ್ಲಿದ್ದರೆ ಉನ್ನತಿ” (https://aralimara.com/2018/08/26/kama-2/) ಲೇಖನ ಕುರಿತು ಹಲವು ಪ್ರತಿಕ್ರಿಯೆ ಮತ್ತು […]

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.