ಒಂದು ಚುಟುಕು ಸಂಭಾಷಣೆ : ರಮಣರ ವಿಚಾರ ಧಾರೆ

ಯುರೋಪಿಯನ್ ಭಕ್ತ ಹಂಫ್ರೀಸ್ ಕೇಳಿದ ಪ್ರಶ್ನೆಗಳಿಗೆ ರಮಣ ಮಹರ್ಷಿಗಳು ನೀಡಿದ ಉತ್ತರ ಇಲ್ಲಿದೆ…

ಹಂಫ್ರೀಸ್ : ಗುರುವೇ, ಜಗತ್ತಿಗೆ ಸಹಾಯ ಮಾಡುವ ಉತ್ಕಟ ಬಯಕೆ ಹೊಂದಿದ್ದೇನೆ. ನನ್ನಿಂದ ಇದು ಸಾಧ್ಯವೇ?
ರಮಣ ಮಹರ್ಷಿ : ಮೊದಲು ನಿನ್ನನ್ನು ನೀನು ಉದ್ಧರಿಸಿಕೋ. ನಂತರ ಜಗತ್ತನ್ನು ಉದ್ಧರಿಸಲು ಸಾಧ್ಯವಾಗುತ್ತದೆ.
ಹಂಫ್ರೀಸ್ : ಹಾಗೆಂದರೆ? ನಾನು ಈಗ ಜಗತ್ತಿಗೆ ಸಹಾಯ ಮಾಡುವ ಯೋಗ್ಯತೆ ಹೊಂದಿಲ್ಲವೆಂದೇ?
ರಮಣ ಮಹರ್ಷಿ : ಹಾಗಲ್ಲ. ಮೊದಲು ನಿನಗೆ ನೀನು ಮಾಡಿಕೊಳ್ಳಬೇಕಾದ ಸಹಾಯದ ಕಡೆ ಗಮನ ಕೊಡು. ನಿನಗೆ ನಿನ್ನ ಸಹಾಯದ ಅಗತ್ಯವಿಲ್ಲ, ನೀನು ಸಂಪೂರ್ಣನಾಗಿದ್ದೀ ಎಂದು ಅನ್ನಿಸಿದರೆ, ಅನಂತರ ಜಗತ್ತಿಗೆ ಸಹಾಯ ಮಾಡುವ ಕುರಿತು ಆಲೋಚಿಸಬಹುದು. ಮತ್ತೊಂದು ವಿಷಯ ನಿನಗೆ ನೆನಪಿರಲಿ. ಜಗತ್ತೆಂದರೆ ಸ್ವತಃ ನೀನೇ ಆಗಿರುವೆ. ನೀನು ಜಗತ್ತಿನೊಳಗೆ ಇರುವಂತೆ, ಜಗತ್ತೂ ನಿನ್ನೊಳಗೆ ಇದೆ. ನೀನು ಮತ್ತು ಜಗತ್ತು ಪರಸ್ಪರ ಭಿನ್ನವಲ್ಲ.
ಹಂಫ್ರಿಸ್ : ಗುರುವೇ, ಕ್ರಿಸ್ತನಂತೆ, ಕೃಷ್ಣನಂತೆ ನಾನೂ ಕೂಡ ಪವಾಡಗಳನ್ನು ನಡೆಸಲು ಸಾಧ್ಯವೇ?
ರಮಣ ಮಹರ್ಷಿ: ಆ ಪವಾಡಗಳನ್ನು ನಡೆಸುವಾಗ ಕೃಷ್ಣನಾಗಲೀ ಕ್ರಿಸ್ತನಾಗಲೀ “ಇದನ್ನು ಮಾಡುತ್ತಿರುವವನು ನಾನು” ಅನ್ನುವ ಭಾವನೆ ತಳೆದಿದ್ದರೇ?
ಹಂಫ್ರಿಸ್: ಇಲ್ಲ ಗುರುವೇ!
ರಮಣ ಮಹರ್ಷಿ: ಹಾಗಾದರೆ, ಉತ್ತರ ನಿನ್ನಲ್ಲೇ ಇದೆ.

Leave a Reply