“ಭೂತವೆಂಬುದಿಲ್ಲ, ಭವಿಷ್ಯವೆಂಬುದಿಲ್ಲ; ಇರುವುದೆಲ್ಲ ವರ್ತಮಾನ ಮಾತ್ರ” ಅನ್ನುತ್ತಾನೆ ಸೂಫಿ ಶಬ್ ಸ್ತರಿ
ನದಿಗೆ ಆದಿ ಅಂತ್ಯ ಎನ್ನುವುದಿಲ್ಲ. ಅದು ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಚಲಿಸುತ್ತಲೇ ಇರುವ ನಿತ್ಯ ಹರಿವು. ಹಾಗೆಯೇ ಭೂತವೆಂಬುದಿಲ್ಲ, ಭವಿಷ್ಯ ಎಂಬುದೂ ಇಲ್ಲ. ಇರುವುದೆಲ್ಲ ಪ್ರತಿಕ್ಷಣದ ಘಟನೆ. ಬದುಕು ಇರುವುದೇ ವರ್ತಮಾನದಲ್ಲಿ ಅನ್ನುತ್ತಾನೆ ಶಬ್ ಸ್ತರಿ.
ವೇದ, ಸೂಫಿ, ಝೆನ್, ಬುದ್ಧ, ಸಂತ ಪರಂಪರೆ, ಸಾಧಕರೆಲ್ಲರೂ ಕಂಡುಕೊಂಡ ಸತ್ಯವಿದು. ಈ ಮಾತನ್ನು ಅವರು ಹಲವು ಬಗೆಯಲ್ಲಿ, ಹಲವು ಭಾಷೆಯಲ್ಲಿ, ಹಲವು ಉಪಮೆಗಳ ಮೂಲಕ ಹೇಳಿದ್ದಾರೆ. ಈ ಸಾಲಿಗೆ ಸೂಫಿ ಶಬ್ ಸ್ತರಿಯೂ ಸೇರಿದ್ದಾನೆ.