ಝೆನ್, ಜಪಾನ್ ಪ್ರವೇಶಿಸುವುದಕ್ಕಿಂತ ಮುಂಚೆ ಅಲ್ಲಿನ ಅಧ್ಯಾತ್ಮಿಕ ಆಶ್ರಮವೊಂದರಲ್ಲಿ ಶಿಷ್ಯರು ಧ್ಯಾನ ಕಲಿಯುತ್ತಿದ್ದರು. ಆ ಶಿಷ್ಯರಲ್ಲಿ ನಾಲ್ವರು ಅತ್ಯಂತ ಆತ್ಮೀಯ ಗೆಳೆಯರಿದ್ದರು.
ಒಮ್ಮೆ ಆ ನಾಲ್ವರು ಗೆಳೆಯರು ಏಳು ದಿನ ಮೌನ ಧ್ಯಾನ ಮಾಡಬೇಕೆಂದು ತೀರ್ಮಾನ ಮಾಡಿ, ಧ್ಯಾನಕ್ಕೆ ಮೊದಲಾದರು.
ಮೊದಲ ದಿನ ಧ್ಯಾನ ಸುಸೂತ್ರವಾಗಿ ಸಂಪನ್ನವಾಯಿತು. ಎರಡನೇಯ ದಿನ ಸಂಜೆ ಕತ್ತಲಾಗುತ್ತಿದ್ದಂತೆ ಒಬ್ಬ ಶಿಷ್ಯ ಅಲ್ಲೆ ಹಚ್ಚಿಟ್ಟಿದ್ದ ದೀಪವನ್ನು ಗಮನಿಸಿದ. ದೀಪ ಕ್ಷೀಣಿಸತೊಡಗಿತ್ತು. ಅವನಿಗೆ ಆತಂಕವಾಗಿ “ಯಾರಾದರೂ ದೀಪ ಸರಿ ಮಾಡಿ “ ಎಂದು ಕೂಗಿ ಬಿಟ್ಟ.
ಎರಡನೇ ಶಿಷ್ಯನಿಗೆ ಮೊದಲನೇಯವ ಮಾತಾಡಿದ್ದನ್ನು ಕೇಳಿ ಆಶ್ಚರ್ಯವಾಯಿತು.
“ ನಾವು ಒಂದು ಮಾತೂ ಆಡಬಾರದು, ಗೊತ್ತಿಲ್ವಾ” ಎಂದು ಆಕ್ಷೇಪ ಮಾಡಿದ.
“ ನೀವಿಬ್ಬರೂ ಮೂರ್ಖರು, ಯಾಕೆ ಮಾತಾಡುತ್ತಿದ್ದೀರಿ” ಎಂದ ಮೂರನೇಯವ.
“ ನಾನೊಬ್ಬನೇ ಮಾತಾಡಲಿಲ್ಲ “ ನಾಲ್ಕನೇಯವ ಸಮಾಧಾನದಿಂದ ಘೋಷಿಸಿದ.
ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ