ಸೂಫಿ ಮತ್ತು ಝೆನ್: ಎರಡು ಚುಟುಕು ಸಂಭಾಷಣೆ

ಹಸನ್ ಬಸ್ರಿ ಒಮ್ಮೆ ಒಬ್ಬ ಹುಡುಗ ದೀಪ ಹಿಡಿದುಕೊಂಡು ಬರುತ್ತಿರುವುದನ್ನು ನೋಡಿ ಆ ಹುಡುಗನನ್ನು ಪ್ರಶ್ನೆ ಮಾಡಿದ.

“ಈ ದೀಪ ಎಲ್ಲಿಂದ ತಂದೆ? “
ಹುಡುಗ ಕೂಡಲೇ ದೀಪ ಆರಿಸಿ ಉತ್ತರಿಸಿದ.
“ಹಸನ್, ಮೊದಲು ದೀಪ ಎಲ್ಲಿ ಹೋಯಿತು ಹೇಳು, ಆಮೇಲೆ ನಾನು ಹೇಳುತ್ತೇನೆ, ದೀಪ ಎಲ್ಲಿಂದ ಬಂತು ಅಂತ “

~

ಸನ್ಯಾಸಿಯೊಬ್ಬ ಮಾಸ್ಟರ್ ಯೂಹ್ ಶಾನ್ ನನ್ನು ಪ್ರಶ್ನೆ ಮಾಡಿದ.

ಸನ್ಯಾಸಿ : ಧ್ಯಾನ ಮಾಡುವಾಗ ಏನು ವಿಚಾರ ಮಾಡುತ್ತಿರುತ್ತಾರೆ?
ಮಾಸ್ಟರ್ : ವಿಚಾರ ಮಾಡದಿರುವ ಬಗ್ಗೆ.
ಸನ್ಯಾಸಿ : ವಿಚಾರ ಮಾಡದಿರುವ ಬಗ್ಗೆ ವಿಚಾರ ಮಾಡುವುದು ಹೇಗೆ?
ಮಾಸ್ಟರ್ : ವಿಚಾರ ಮಾಡದೇ.

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

 

Leave a Reply