ಮೂಲ: ಫರೀದುದ್ದೀನ್ ಅತ್ತಾರ (ಅತ್ತಾರ್ ನಿಶಾಪುರಿ) | ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ
ನಿರ್ಜೀವ ರಾತ್ರಿಯಲಿ ಸೂಫಿ ಬಿಕ್ಕಿದ;
“ಜಗತ್ತು ಶವಪೆಟ್ಟಿಗೆ,
ಜನರು ಬಂಧಿ;
ಮೂರ್ಖತನವೇ ಬದುಕಾಗಿ
ವಿನಾಶದ ಹಾದಿ ತುಳಿಯುತ್ತಿದ್ದಾರೆ!
ಮತ್ಯು ಬಂದು ಪೆಟ್ಟಿಗೆ ತೆರೆದಾಗ
ರೆಕ್ಕೆ ಮೂಡಿದವರೆಲ್ಲ ನಿತ್ಯತೆಗೆ ಹಾರಿ ಹೋಗುವರು;
ಇಲ್ಲದವರು, ಹುದುಗಿ ಹೋಗುವರು ಇಲ್ಲೇ
ಶಾಶ್ವತವಾಗಿ.
ಕಾಲಹರಣ ಮಾಡಬೇಡಿ,
ಓ ನನ್ನ ಗೆಳೆಯರೇ!
ಶವ ಪೆಟ್ಟಿಗೆಯ ಮುಚ್ಚಲ ತೆಗೆಯುವವರೆಗೆ,
ದೇವಲೋಕಕೆ ಹಾರಲು ದಾರಿ ಮಾಡಿಕೊಳ್ಳಿ;
ನಿಮ್ಮ ನಿಮ್ಮ ಪಕ್ಕೆಗಳಲ್ಲಿ
ಅರಿವಿನ ರೆಕ್ಕೆ ಬೆಳೆಸಿಕೊಳ್ಳಿ