“ನೀನೇ ಜಗತ್ತು, ಜಗತ್ತೇ ನೀನಾಗಿರುವೆ!” ~ ಛಾಂದೋಗ್ಯ ಉಪನಿಷತ್ತು
“ಹೊರಗಿನ ಆಕಾಶ ಎಷ್ಟು ವಿಸ್ತಾರವಾಗಿದೆಯೋ, ಒಳಗಿನ ಆಕಾಶವೂ ಅಷ್ಟೇ ವಿಸ್ತಾರವಾಗಿದೆ. ಪ್ರಕೃತಿಯು ಪಂಚಭೂತಗಳಿಂದ ಆಗಿರುವಂತೆಯೇ ನಮ್ಮ ದೇಹವೂ ಪಂಚಭೂತಗಳಿಂದ ಉಂಟಾಗಿದೆ. ಹೊರಗೇನಿದೆಯೋ ಅದೇ ಒಳಗಿನಲ್ಲೂ ಇದೆಯಾದ್ದರಿಂದ; ನೀನೇ ಜಗತ್ತು, ಜಗತ್ತೇ ನೀನಾಗಿದ್ದೀಯ” ಅನ್ನುತ್ತದೆ ಛಾಂದೋಗ್ಯ ಉಪನಿಷತ್ತು.