ಒಬ್ಬ ಸನ್ಯಾಸಿ ನೆನೆಯಲಿಲ್ಲ, ಯಾಕೆ? : ಝೆನ್ ಸಂಭಾಷಣೆ

ಝೆನ್ ಮಾಸ್ಟರ್, ತನ್ನ ಶಿಷ್ಯರಿಂದ ಒಂದು ಸಮಸ್ಯೆಗೆ ಪರಿಹಾರ ಕೇಳಿದ.

“ ಇಬ್ಬರು ಸನ್ಯಾಸಿಗಳು ಮಳೆಯಲ್ಲಿ ನಡೆಯುತ್ತಿದ್ದಾರೆ,  ಒಬ್ಬ ಸನ್ಯಾಸಿ ನೆನೆಯಲಿಲ್ಲ. ಯಾಕೆ ? “

ಶಿಷ್ಯ 1 : ಅವನ ಬಳಿ ಕೊಡೆ ಇರಬಹುದು.

ಶಿಷ್ಯ 2 : ಮಳೆ, ರಸ್ತೆಯ ಒಂದೇ ಬದಿ ಸುರಿಯುತ್ತಿರಬಹುದು.

ಶಿಷ್ಯ 3 : ಒಬ್ಬ ರಸ್ತೆ ಬದಿಯ ಅಂಗಡಿಗಳ ಮೇಲ್ಕಟ್ಟುಗಳ ಕೆಳಗೆ ನಡೆಯುತ್ತಿರಬಹುದು.

ಮಾಸ್ಟರ್ : ನೀವೆಲ್ಲ ನನ್ನ ಪ್ರಶ್ನೆ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ.

ಶಿಷ್ಯರು : ಗೊತ್ತಾಗ್ತಾ ಇಲ್ಲ, ನೀವೇ ಉತ್ತರ ಹೇಳಿ ಮಾಸ್ಟರ್.

ಮಾಸ್ಟರ್ : ಮಳೆಯಲ್ಲಿ ಇಬ್ಬರೂ ನೆನೆದರು.  

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

Leave a Reply