ಬೇರೆ ಬೇರೆ ಆಶ್ರಮದ ಇಬ್ಬರು ಗುರುಗಳು ಮಾತಾಡಿಕೊಳ್ಳುತ್ತಿದ್ದರು.
ಗುರು 1 : ಶಿಷ್ಯರಿಗೆ ಯಾವತ್ತೂ ಕಂಡರಿಯಲು ಸಾಧ್ಯವಾಗದ ಸಂಗತಿಯನ್ನೆ ಹೇಳಬೇಕು.
ಗುರು 2 : ಯಾಕೆ?
ಗುರು 1 : ನೀನು ಅವರಿಗೆ “ನಾನು ಮಂಗಳ ಗ್ರಹಕ್ಕೆ ಹೋಗಿದ್ದೆ; ಅಲ್ಲಿ ಸಾವಿರಾರು ಅನ್ಯಗ್ರಹ ಜೀವಿಗಳನ್ನು ಕಂಡೆ” ಎಂದು ಹೇಳಿದರೆ, ಅವರು ನಂಬಲು ಇಷ್ಟಪಡುತ್ತಾರೆ. ನೀನೇನಾದರೂ “ಈ ದಿನ ಚೆನ್ನಾಗಿದೆ” ಅಂದರೆ, ಶಿಷ್ಯರಲ್ಲಿ ಯಾರಾದರೊಬ್ಬ ಮೂರ್ಖ “ನೆನ್ನೆಯಷ್ಟು ಚೆನ್ನಾಗಿಲ್ಲ” ಎಂದೋ, ಮತ್ತೊಬ್ಬ “ಇಲ್ಲಿಯವರೆಗೆ ಚೆನ್ನಾಗಿದೆ, ಮುಂದೆ ಹೇಗೋ ಏನೋ” ಅಂತಲೋ ವಾದಕ್ಕೆ ಇಳಿಯುತ್ತಾನೆ!