ಭರತ ವಂಶಾವಳಿ : ಪುರಾಣಗಳಲ್ಲಿ ವಂಶಾವಳಿ | ಸನಾತನ ಸಾಹಿತ್ಯ ~ ಮೂಲಪಾಠಗಳು #40

ಪೌರಾಣಿಕ ಪಠ್ಯಗಳಲ್ಲಿ ದಾಖಲಾಗಿರುವಂತೆ ಸನಾತನ ಪರಂಪರೆಯ ವಂಶಾವಳಿಯನ್ನು ಇಲ್ಲಿ ನೀಡಲಾಗಿದೆ. ಇದು ಈ ಸರಣಿಯ 3ನೇ ಭಾಗ. ಮಾಹಿತಿ ಕೃಪೆ : WWW.VYASAONLINE.COM

ಹಿಂದಿನ ಭಾಗವನ್ನು ಇಲ್ಲಿ ಓದಿ :https://aralimara.wordpress.com/2018/11/13/sanatana-2/

ಪ್ರಚೇತಸನಿಗೆ ಹತ್ತು ಪುತ್ರರಿದ್ದರು; ಎಲ್ಲರೂ ಅತೀವ ತೇಜಸ್ಸು ಮತ್ತು ಕಾಂತಿಯನ್ನು ಹೊಂದಿದ್ದರು. ತೇಜಸ್ಸಿನಲ್ಲಿ ಮಹರ್ಷಿಗಳ ಸಮನಾಗಿದ್ದರು. ಸಂತರ ಪ್ರಕಾರ ಅವರು ಮಾನವರ ಪೂರ್ವಜರು. ಹಿಂದೆ ಇವರೆಲ್ಲರೂ ಮಿಂಚಿನಲ್ಲಿ ಸುಟ್ಟು ಭಸ್ಮರಾದರು.

ಇಳೆಯಿಂದ ವಿದ್ವಾನ್ ಪುರೂರವನು ಜನಿಸಿದನು. ಅವನ ತಾಯಿ ಮತ್ತು ತಂದೆ ಇಬ್ಬರೂ ಅವಳೇ. ಪುರೂರವನು ಹದಿಮೂರು ಸಮುದ್ರ ದ್ವೀಪಗಳನ್ನು ಆಳಿದನು. ಆ ಮಹಾಯಶನು ಮನುಷ್ಯನಾಗಿದ್ದರೂ ಸದಾ ಅಮಾನುಷರ ಸಂಗದಲ್ಲಿಯೇ ಇರುತ್ತಿದ್ದನು. ಅವನು ಊರ್ವಶಿಯಲ್ಲಿ ಆರು ಮಕ್ಕಳನ್ನು ಪಡೆದನು: ಆಯುಸ್, ಧೀಮಾನ್, ದೃಢಾಯುಷ್, ಅಮಾವಸು, ವನಾಯುಶ್ ಮತ್ತು ಶೃತಾಯುಶ್.

ಆಯುಸನು ಸ್ವರ್ಭಾನುವಿನ ಮಗಳಿನಿಂದ ನಾಲ್ಕು ಪುತ್ರರನ್ನು ಪಡೆದನು:ನಹುಷ,ವೃದ್ಧಶರ್ಮ,ರಜಿಂರಂಭ ಮತ್ತು ಅನೇನಸ. ಆಯುಸನ ಪುತ್ರರಲ್ಲಿ ನಹುಷನು ಧೀಮಂತ ಮತ್ತು ಸತ್ಯಪರಾಕ್ರಮಿಯಾಗಿದ್ದು ಆ ಪೃಥಿವೀಪತಿಯು ಸುಮಹತ್ತರ ಧರ್ಮದಿಂದ ರಾಜ್ಯವನ್ನಾಳಿದನು.

ನಹುಷನು ಆರು ಪುತ್ರರಿಗೆ ಜನ್ಮವಿತ್ತನು: ಯತಿ, ಯಯಾತಿ, ಸಂಯಾತಿ, ಆಯಾತಿ, ಪಾಂಚ ಮತ್ತು ಉದ್ಧವ.

ನಾಹುಷ ಯಯಾತಿಯು ದೇವಯಾನಿ ಮತ್ತು ಶರ್ಮಿಷ್ಠೆಯರಲ್ಲಿ ಹುಟ್ಟಿದ ಅವನ ಪುತ್ರರೆಲ್ಲರೂ ಮಹೇಷ್ವಾಸರೂ ಸುಗುಣರೂ ಆಗಿದ್ದರು. ಯದು ಮತ್ತು ತುರ್ವಾಸು ದೇವಯಾನಿಯಲ್ಲಿ ಜನಿಸಿದರು. ಶರ್ಮಿಷ್ಠೆಯಲ್ಲಿ ದ್ರುಹು, ಅನು ಮತ್ತು ಪುರು ಜನಿಸಿದರು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.