ತಿಳಿವಿನ ಹೊಳಹುಗಳು : 25 ಗಾದೆಗಳು

ಸಂಗ್ರಹ ಮತ್ತು ಅನುವಾದ : ಸುನೈಫ್ ವಿಟ್ಲ
1.
ವೇಗವಾಗಿ ನಡೆಯಬೇಕೆಂದಿದ್ದರೆ, ಏಕಾಂಗಿಯಾಗಿ ನಡೆಯಿರಿ
ಬಹುದೂರ ಕ್ರಮಿಸಬೇಕೆಂದಿದ್ದರೆ, ಜೊತೆಯಾಗಿ ಸಾಗಿರಿ
~ಆಫ್ರಿಕಾದ ಗಾದೆ

2.
ಏಳು ಸಲ ಬೀಳಿ
ಎಂಟನೇ ಬಾರಿ ಎದ್ದೇಳಿ
~ಜಪಾನ್ ಗಾದೆ

3.
ಸಂತಸ ಹಂಚಿಕೊಂಡರೆ ಇಮ್ಮಡಿ
ದುಃಖ ಹಂಚಿಕೊಂಡರೆ ಅರ್ಧ
~ಸ್ವೀಡನ್ ಗಾದೆ

4.
ಉದ್ದವಲ್ಲ; ಮಾತು ತೂಕವಿರಲಿ
~ಯಿದ್ದಿಶ್ ಗಾದೆ

5.
ಧೀರ್ಘಾಯಿಷಿ ಆಗಲಾರದಿದ್ದರೆ
ಬದುಕನ್ನು ಆಳವಾಗಿಸು
~ಇಟಲಿ ಗಾದೆ

6.
ಒಳ್ಳೆಯದನ್ನು ಮಾಡು
ಮತ್ತು
ಸಮುದ್ರಕ್ಕೆ ಎಸೆದು ಬಿಡು
~ಅರೇಬಿಕ್ ಗಾದೆ

7.
ಪ್ರೇಮಿಗೆ ಅಸಾಧ್ಯತೆಗಳಿಲ್ಲ
~ಭಾರತೀಯ ಗಾದೆ

8.
ಕತ್ತಲನ್ನು ದೂರುವುದಕ್ಕಿಂತ
ದೀಪ ಹಚ್ಚುವುದು ಒಳಿತು
~ಚೀನಾದ ಗಾದೆ

9.
ಬಲ ಪ್ರಯೋಗಿಸುವವರು
ಅತಾರ್ಕಿಕರಾಗಿರುವರು
~ಕೀನ್ಯಾದ ಗಾದೆ

10.
ನೀರು ತಳದಲ್ಲೇ ಹರಿಯುತ್ತದೆ
~ಲ್ಯಾಟಿನ್ ಗಾದೆ

11.
ಯಾತ್ರಿಕನಷ್ಟೇ ಮನುಷ್ಯರ ಬೆಲೆ ಬಲ್ಲ
~ಮೂರಿಷ್ ಗಾದೆ

12.
ಹಗಲು ನೆನೆಸಿಟ್ಟದ್ದನ್ನು
ರಾತ್ರಿ ತೊಳೆಯುತ್ತದೆ
~ಸ್ವಿಸ್ ಗಾದೆ

13.
ಸಾವಿರ ಸಲ ಅಳೆದು
ಒಂದು ಸಲ ಕತ್ತರಿಸು
~ಟರ್ಕಿಯ ಗಾದೆ

14.
ಚಮಚ ರುಚಿಯರಿಯದು;
ವಿದ್ಯಾವಂತ ಮೂರ್ಖ ಜ್ಞಾನವರಿಯದಂತೆ
~ವೆಲ್ಶ್ ಗಾದೆ

15.
ಚೆಂದದ ಅಂಜೂರದೊಳಗೂ
ಹುಳ ಬಿದ್ದಿರಬಹುದು
~ಝುಲು ಗಾದೆ

16.
ನೀವು ಬದಲಾಗಿ
ದೆಸೆ ಬದಲಾಗುತ್ತದೆ
~ಪೋರ್ಚುಗೀಸ್ ಗಾದೆ

17.
ಪ್ರೇಮದಲ್ಲಿ
ಒಬ್ಬರು ಮುತ್ತುವರು
ಮತ್ತೊಬ್ಬರು ತುಟಿ ನೀಡುವರು
~ಫ್ರೆಂಚ್ ಗಾದೆ

18.
ಶೈತಾನ ಸೂಜಿಮೊನೆಯಲ್ಲಿ ಬೆಳೆಯುವ ಓಕ್ ಮರ
~ಇಥಿಯೋಪಿಯಾದ ಗಾದೆ

19.
ಜಾಸ್ತಿ ಗುರಿಯಿಟ್ಟವ
ಕೆಲವನ್ನಷ್ಟೇ ತಲುಪುತ್ತಾನೆ
~ಜರ್ಮನಿಯ ಗಾದೆ

20.
ನಿಮ್ಮಲ್ಲಿ ಚಾಡಿ ಹೇಳುವವ
ನಿಮ್ಮ ಬಗ್ಗೆಯೂ ಹೇಳದಿರಲಾರ
~ಸ್ಪೇನ್ ಗಾದೆ

21.
ಸೌಂದರ್ಯ ನೋಡುಗನ ಕಣ್ಣಲ್ಲಿದೆ
~ಇಂಗ್ಲೀಷ್ ಗಾದೆ

22.
ಮರಳಬಹುದಾದ ದೂರಕ್ಕಷ್ಟೇ ಈಜು
~ಡ್ಯಾನಿಷ್ ಗಾದೆ

23.
ಅಜ್ಞಾನ ಲಜ್ಜೆಯ ಸಂಗತಿಯಲ್ಲ
ಜ್ಞಾನ ಹುಡುಕದಿರುವುದೇ ನಾಚಿಕೆ
~ ರಷ್ಯಾ ಗಾದೆ

24.
ಪ್ರಾಯ ಆದರಣೀಯ
ಆದರೆ, ಯೌವ್ವನವೇ ಶ್ರೇಷ್ಠ
~ಐರಿಷ್ ಗಾದೆ

25.
ದೊಡ್ಡ ಹೆಜ್ಜೆಗಳು
ದೊಡ್ಡ ಅಂತರವನ್ನು ಸೃಷ್ಟಿಸುತ್ತದೆ
~ಬರ್ಮಾ ಗಾದೆ

Leave a Reply