೧. ತೈಲೋಕ್ಯ ಮೋಹನ ಚಕ್ರ : ಮೊದಲನೆಯ ಭೂಪುರದ ಪಶ್ಚಿಮ ದಿಕ್ಕಿನಲ್ಲಿ ಸರ್ವಸಂಕ್ಷೋಭಿಣಿ , ಉತ್ತರದಲ್ಲಿ ವಿಧಾರಿಣಿ , ಪೂರ್ವದಲ್ಲಿ ಸರ್ವಾಕರ್ಷಿಣಿ , ದಕ್ಷಿಣದಲ್ಲಿ ಸರ್ವ ಶಂಕರಿ , ವಾಯುವ್ಯದಲ್ಲಿ ಸರ್ವೋನ್ಮಾದಿನಿ , ಈಶಾನ್ಯದಲ್ಲಿ ಸರ್ವ ಮಹಾಂಕುಶಾ , ಆಗ್ನೇಯದಲ್ಲಿ ಖೇಚರಿ , ನಿಋಋತಿಯಲ್ಲಿ ಸರ್ವಬೀಜಾ, ಅದೋಭಾಗದಲ್ಲಿ ಸರ್ವಯೋನಿ , ಊರ್ಧ್ವದಲ್ಲಿ ಸರ್ವೇಶ್ವರಿ ಎಂಬ ಮುದ್ರಾಶಕ್ತಿಗಳಿರುವರು.
೨. ಸರ್ವಾಶಾಪರಿಪೂರಕ ಚಕ್ರ : ಎರಡನೆಯ ಷೋಡಶದಳಪದ್ಮದಲ್ಲಿ ಪೂರ್ವದಿಂದ ಅಪ್ರದಕ್ಷಿಣವಾಗಿ – ಕಾಮಾಕರ್ಷಿಣಿ , ಸರ್ವಾಕರ್ಷಿಣೀ , ಬುದ್ದಾಕರ್ಷಿಣೀ, ಅಹಂಕಾರಾಕರ್ಷಿಣೀ, ಶಬ್ದಾಕರ್ಷಿಣೀ , ಸ್ಪರ್ಶಾಕರ್ಷಿಣೀ, ರೂಪಾಕರ್ಷಿಣೀ, ರಸಾಕರ್ಷಿಣೀ, ಗಂಧಾಕರ್ಷಿಣೀ, ಚಿತ್ತಾಕರ್ಷಿಣೀ, ಧೈರ್ಯಾಕರ್ಷೀಣೀ, ಸ್ಮೃತ್ಯಾಕರ್ಷಿಣೀ, ನಾಮಾಕರ್ಷಿಣೀ, ಬೀಜಾಕರ್ಷೀಣೀ, ಆತ್ಮಾಕರ್ಷಿಣೀ, ಅಮೃತಾಕರ್ಷಿಣೀ, ಶರೀರಾಕರ್ಷಿಣೀ ಎಂಬ ಗುಪ್ತ ಯೋಗಿನಿಯರಿರುವರು.
೩. ಸರ್ವ ಸಂಕ್ಷೋಭಣ ಚಕ್ರ : ಮೂರನೆಯ ಅಷ್ಟದಳಪದ್ಮದಲ್ಲಿ ಪೂರ್ವದಲ್ಲಿ ಅನಂಗಕುಸುಮಾ , ದಕ್ಷಿಣದಲ್ಲಿ ಅನಂಗಮೇಖಲಾ, ಪಶ್ಚಿಮದಲ್ಲಿ ಅನಂಗಮದನಾ , ಉತ್ತರದಲ್ಲಿ ಮದನಾತುರಾ , ಆಗ್ನೇಯದಲ್ಲಿ ಅನಂಗರೇಖಾ , ನಿಋಋತಿಯಲ್ಲಿ ಅನಂಗವೇಗಿನೀ, ವಾಯುವ್ಯದಲ್ಲಿ ಅನಂಗಾಂಕುಶಾ, ಈಶಾನ್ಯದಲ್ಲಿ ಅನಂಗಮಾಲಿನಿ ಎಂಬ ಸರ್ವಾಭಿಷ್ಟಪ್ರದ ಯೋಗಿನಿಯರಿರುವರು.
೪. ಸರ್ವಸೌಭಾಗ್ಯದಾಯಕ ಚಕ್ರ : ಚತುರ್ದಶಾರದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ ಸರ್ವಸಂಕ್ಷೋಭಿಣಿ, ಸರ್ವವಿದ್ರಾವಿಣೀ, ಸರ್ವಾಕರ್ಷಿಣೀ, ಸರ್ವಾಹ್ಲಾದಕಾರಿಣೀ, ಸರ್ವಸಂಮೋಹಿನೀ, ಸರ್ವಸ್ತಂಭನರೂಪಿಣಿ, ಸರ್ವಜೃಂಭಿಣೀ, ಸರ್ವಾಕರ್ಷಾಣಕಾರಿಣೀ, ಸರ್ವರಂಜಿನಿ , ಸರ್ವೊನ್ಮಾದಿನಿ, ಸರ್ವಾರ್ಥಸಾಧಿನೀ, ಸರ್ವಸಂಪತ್ತಿಪೂರಿಣೀ, ಸರ್ವಮಂತ್ರಮಯಿ, ಸರ್ವದ್ವಂದ್ವಮಯಿ, ಎಂಬ ಸಂಪ್ರದಾಯ ಯೋಗಿನಿಯರಿರುವರು.
೫. ಸರ್ವಾರ್ಥಸಾಧಕ ಚಕ್ರ : ಐದನೆಯ ಬಹಿರ್ದಶಾರದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ , ಸರ್ವಸಿದ್ದಿಪ್ರದಾ, ಸರ್ವಸಂಪತ್ಪ್ರದಾ , ಸರ್ವಪ್ರಿಯಂಕರೀ, ಸರ್ವಮಂಗಳಕಾರಿಣೀ , ಸರ್ವಕಾಮಪ್ರದಾ, ಸರ್ವದುಃಖವಿಮೋಚಿನೀ, ಸರ್ವಮೃತ್ಯುಪ್ರಶಮನೀ , ಸರ್ವವಿಘ್ನನಿವಾರಿಣೀ, ಸರ್ವಾಂಗಸುಂದರಿ, ಸರ್ವಸೌಭಾಗ್ಯದಾಯಿನೀ ಎಂಬ ಹತ್ತು ಕುಲೋತ್ತೀರ್ಣ ಯೋಗಿನಿಯರಿರುವರು.
೬. ಸರ್ವರಕ್ಷಾಕರ ಚಕ್ರ : ಆರನೆಯ ಅಂತರ್ದಶಾರದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ ಸರ್ವಜ್ಞಾ , ಸರ್ವಶಕ್ತಿಃ , ಸರ್ವೈಶ್ವರ್ಯಫಲಪ್ರದಾ , ಸರ್ವಜ್ಞಾನಮಯೀ, ಸರ್ವವ್ಯಾಧಿವಿನಾಶಿನಿ , ಸರ್ವಾಧಾರಸ್ವರೂಪಾ, ಸರ್ವಪಾಪಹರ , ಸರ್ವಾನಂದಮಯೀ, ಸರ್ವರಕ್ಷಾಸ್ವರೂಪಿಣಿ, ಸರ್ವೇಪ್ಸಿತಫಲಪ್ರದಾ , ಎಂಬ ಹತ್ತು ನಿಗರ್ಭ ಯೋಗಿನಿಯರಿರುವರು.
೭. ಸರ್ವರೋಗಹರ ಚಕ್ರ : ಏಳನೆಯ ಅಷ್ಟಕೋಣದಲ್ಲಿ – ಪೂರ್ವದಿಂದ ಅಪ್ರದಕ್ಷಿಣವಾಗಿ ವಶಿನೀ , ಕಾಮೇಶೀ, ಮೋದಿನೀ, ವಿಮಲಾ, ಅರುಣಾ, ಜಯನೀ , ಸರ್ವೇಶೀ, ಕುಲಸುಂದರಿ ಎಂಬ ಎಂಟು ರಹಸ್ಯಯೋಗಿನಿಯರಿರುವರು.
೮. ಸರ್ವಸಿದ್ದಿಪ್ರದ ಚಕ್ರ : ಎಂಟನೆಯ ತ್ರಿಕೋಣದಲ್ಲಿ – ಮೂರು ಮೂಲೆಗಳಲ್ಲಿಯೂ ಮೂರು ಪೀಠಗಳಿರುವುವು. ಅದರಲ್ಲಿ ಪೂರ್ವದಿಕ್ಕಿನ ಕಾಮರೂಪವೆಂಬ ಪೀಠದಲ್ಲಿ ವಜ್ರೇಶ್ವರಿಯೂ, ವಾಮದಲ್ಲಿರುವ ಜಾಲಂಧರ ಪೀಠದಲ್ಲಿ ಭಗಮಾಲಿನಿಯೂ ಇರುವರು.
೯. ಸರ್ವಾನಂದಮಯ ಚಕ್ರ : ತ್ರಿಕೋಣಮಧ್ಯದಲ್ಲಿರುವ ಮಹಾಬಿಂದುವೆಂಬ ಮಹಾಪೀಠದ ಮಧ್ಯದಲ್ಲಿ ಏಕಕಾಲದಲ್ಲಿ ಉದಿಸಿದ ಸಾವಿರ ಸೂರ್ಯಪ್ರಕಾಶವುಳ್ಳ ವಿಮಾನಾಕಾರವಾದ ಮಂಚವು ಕಾಣಿಸುವುದು. ಆ ಮಂಚಕ್ಕೆ ಬ್ರಹ್ಮನು ಈಶಾನ್ಯ ದಿಕ್ಕಿನ ಕಾಲಾಗಿಯೂ , ವಿಷ್ಣುವು ಅಗ್ನಿ ದಿಕ್ಕಿನ ಕಾಲಾಗಿಯೂ , ರುದ್ರನು ನೈಋತ್ಯ ದಿಕ್ಕಿನ ಕಾಲಾಗಿಯೂ , ಈಶ್ವರನು ವಾಯುವ್ಯ ದಿಕ್ಕಿನ ಕಾಲಾಗಿಯೂ , ಸದಾಶಿವನು ಮಧ್ಯೆಫಲಕವಾಗಿಯೂ ಇರುವರು. ಆ ಮಂಚದ ಮಧ್ಯದಲ್ಲಿ ಸರ್ವಕಾಮೇಶ್ವರಿ ಸಚ್ಚಿದಾನಂದರೂಪಿಣೀ ಸರ್ವಾನುಗ್ರಹಶಾಲಿನೀ ಶಿವಾಂಕನಿಲಯಾಶಿವಾಭಿನ್ನಾ ಶ್ರೀಚಕ್ರನಗರಸಾಮ್ರಾಜ್ಞಿಯೂ ಆದ ಶ್ರೀಮಹಾತ್ರಿಪುರಸುಂದರಿಯು ಸುಖವಾಗಿ ವಿರಾಜಿಸುತ್ತಿರುವಳು.