ಯಾವುದು ಸಾತ್ವಿಕ ಬುದ್ಧಿ? : ಭಗವದ್ಗೀತೆಯ ಬೆಳಕು

ನಮ್ಮ ಆತ್ಮಸಾಕ್ಷಿ ಸಾತ್ವಿಕವಾಗಿಯೇ ಇರುತ್ತದೆ. ಅದರ ಮಾತು ಕೇಳದೆ ನಾವು ಗೊಂದಲಕ್ಕೆ, ಚಿಂತೆಗೆ ಒಳಗಾಗುತ್ತಾ ಇರುತ್ತೇವೆ. ಆದ್ದರಿಂದ, ನಾವು ಸಾತ್ವಿಕರಾಗಲು ಇರುವ ಸುಲಭ ಉಪಾಯವೆಂದರೆ, ನಮ್ಮ ಆತ್ಮಸಾಕ್ಷಿಯ ಮಾತು ಕೇಳುವುದು.

gita-04

ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ ।
ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥ 18.30 ॥

ಅರ್ಥ : ಇಹದ ಧರ್ಮ – ಪರದ ಧರ್ಮ, ಮಾಡಬೇಕಾದ್ದು – ಮಾಡಬಾರದ್ದು, ಭಯ ಪಡಬೇಕಾದದ್ದು – ಭಯಪಡಬಾರದ್ದು, ಬಂಧನದ ದಾರಿ – ಬಿಡುಗಡೆಯ ದಾರಿ ಇವನ್ನೆಲ್ಲ ಅರಿಯಬಲ್ಲ ಬುದ್ಧಿ ಸಾತ್ವಿಕ ಬುದ್ಧಿ.

ತಾತ್ಪರ್ಯ : ನಾವು ಬಹುತೇಕರು ಸದಾ ‘ಇದನ್ನು ಮಾಡಬೇಕೋ ಬೇಡವೋ’ ಎನ್ನುವ ಗೊಂದಲದಲ್ಲೇ ಇರುತ್ತೇವೆ. ಅದು ಯಾವುದೇ ಕೆಲಸವಿರಲಿ, ನಮಗೆ ನಿಶ್ಚಯಿಸುವುದು ಕಡು ಕಷ್ಟ. ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವುದು ಕಷ್ಟವಾಗುತ್ತದೆ. ಧರ್ಮ – ಅಧರ್ಮ, ಪಾಪ – ಪುಣ್ಯ, ಭಯ – ಅಭಯ, ಬಂಧನದ ಮತ್ತು ಬಿಡುಗಡೆಯ ದಾರಿಗಳು – ಇವೆಲ್ಲದರ ಬಗ್ಗೆ ಖಚಿತವಾದ ನಿರ್ಧಾರ ತಾಳುವ ಕ್ಷಮತೆಯೇ ಸಾತ್ವಿಕ ಬುದ್ಧಿ. 

ವಾಸ್ತವದಲ್ಲಿ ನಮ್ಮ ಆತ್ಮಸಾಕ್ಷಿ ಸಾತ್ವಿಕವಾಗಿಯೇ ಇರುತ್ತದೆ. ಅದರ ಮಾತು ಕೇಳದೆ ನಾವು ಗೊಂದಲಕ್ಕೆ, ಚಿಂತೆಗೆ ಒಳಗಾಗುತ್ತಾ ಇರುತ್ತೇವೆ. ಆದ್ದರಿಂದ, ನಾವು ಸಾತ್ವಿಕರಾಗಲು ಇರುವ ಸುಲಭ ಉಪಾಯವೆಂದರೆ, ನಮ್ಮ ಆತ್ಮಸಾಕ್ಷಿಯ ಮಾತು ಕೇಳುವುದು.

1 Comment

Leave a Reply