ರಾಮಾಯಣ ಆದರ್ಶ ಕಥನದ ಮಹಾಸಾಗರ. ಅದರಿಂದ ಕೆಲವು ಸೂಕ್ತಿ ಮುಕ್ತಕಗಳನ್ನು ಆರಿಸಿ ನೀಡಿದ್ದಾರೆ ‘ಅನ್ವೇಷಣಮ್’ ಬಳಗದ ಅಪ್ರಮೇಯ.

ವ್ಯಸನೇ ವಾರ್ಥಕೃಚ್ರ್ಚೇ ವಾ ಭಯೇ ವಾ ಜೀವಿತಾತಂಕೇ |
ವಿಮೃಶನ್ ವೈ ಸ್ವಯಾ ಬುದ್ಧ್ಯಾ ದೃತಿಮಾನ್ನಾವಸೀದತಿ ||೯||
ಬಾಲಿಶಸ್ತು ನರೋ ನಿತ್ಯಂ ವೈಕ್ಲವ್ಯಂ ಯೋsನುವರ್ತತೇ |
ಸ ಮಜ್ಜತ್ಯವಶಃ ಶೋಕೇ ಭಾರಾಕ್ರಾಂತೇವ ನೌರ್ಜಲೇ ||೧೦||
[ಕಿಷ್ಕಿಂಧಾ ಕಾಂಡ, ಸರ್ಗ ೭ ]
ದುಃಖದ ಕಾಲದಲ್ಲಾಗಲಿ ಆರ್ಧಿಕವಾದ ಮುಗ್ಗಟ್ಟಿನಲ್ಲಾಗಲಿ, ಪ್ರಾಣಾಂತಕ ವಿಪತ್ತಿನಲ್ಲಾಗಲಿ, ಸ್ವಬುದ್ಧಿಯಿಂದ ವಿಮರ್ಶಿಸಿ ಧೈರ್ಯವನ್ನು ತಂದುಕೊಳ್ಳುವವರಿಗೆ ಯಾವ ಹಾನಿಯೂ ಒದಗದು.
ಆದರೆ ಯಾರು ವಿಮರ್ಶೆ ಇಲ್ಲದೆ ಥಟ್ಟನೆ ಎದೆಗುಂದುವರೋ ಅವರು ಬೇರೆ ದಿಕ್ಕಿಲ್ಲದೇ ಶೋಕದಲ್ಲಿ ಮುಳುಗಿ ಹೋಗುತ್ತಾನೆ. ಹೊರಲಾರದ ಹೊರೆಯನ್ನು ಹೊತ್ತ ದೋಣಿಯು ನೀರಿನಲ್ಲಿ ಮುಳುಗುವಂತೆ ದುಃಖದಿಂದ ಕುಸಿದುಹೋಗುತ್ತಾರೆ.