ಬೇಗ ಏಳುವುದರ ನಷ್ಟ : ನಸ್ರುದ್ದೀನನ ಕಥೆಗಳು

Mullaಮುಲ್ಲಾ ನಸ್ರುದ್ದೀನನ ತಂದೆ ಹೇಳಿದ, “ಮಗನೇ, ನಾಳೆಯಿಂದ ನೀನು ಬೆಳಗ್ಗೆ ಬೇಗ ಏಳೋದು ರೂಢಿ ಮಾಡಿಕೋ”
“ಯಾಕೆ?” ಕೇಳಿದ ನಸ್ರುದ್ದೀನ್.

ತಂದೆ : ಅದು ಒಳ್ಳೆ ಅಭ್ಯಾಸ
ನಸ್ರುದ್ದೀನ್ : ನನಗೆ ಹಲವು ಒಳ್ಳೆ ಅಭ್ಯಾಸಗಳಿವೆ. ಇದರಲ್ಲೇನು ವಿಶೇಷ?
ತಂದೆ : ಇವತ್ತು ಬೇಗ ಎದ್ದು ಮುಂಜಾನೆಯ ವಿಹಾರಕ್ಕೆ ಹೋದಾಗ ರಸ್ತೆಯಲ್ಲಿ ನನಗೆ ಬಂಗಾರದ ನಾಣ್ಯಗಳ ಸಂಚಿ ಸಿಕ್ಕತು. ನೋಡು! ಬೇಗ ಎದ್ದರೆ ಇಂಥಾ ಲಾಭಗಳುಂಟು.
ನಸ್ರುದ್ದೀನ್ : ಹೋ! ನೆನ್ನೆ ರಾತ್ರಿ ನಾನು ಬಹಳ ತಡವಾಗಿ ಬಂದೆ. ರಸ್ತೆಯಲ್ಲಿ ಸಂಚಿ ಇರಲಿಲ್ಲವಲ್ಲ!
ತಂದೆ : ಬಹುಶಃ ಬೆಳಗ್ಗೆ ಯಾರೋ ಬೀಳಿಸಿಕೊಂಡುಹೋಗಿರಬೇಕು!

“ನಿಮಗೆ ಚಿನ್ನದ ನಾಣ್ಯಗಳ ಸಂಚಿ ಸಿಕ್ಕಿದೆ ಅಂದರೆ, ನಿಮಗಿಂತ ಬೇಗ ಎದ್ದವರು ಅದನ್ನು ಬೀಳಿಸಿಕೊಂಡಿರಬೇಕು. ಅಂದರೆ… ಬೇಗ ಏಳುವುದರಿಂದ ನಷ್ಟವಾಗುವ ಸಂಭವವೂ ಉಂಟು ಎಂದಾಯ್ತು!” ಅನ್ನುತ್ತಾ ಮುಸುಕು ಹಾಕಿ ಮಲಗಿದ ನಸ್ರುದ್ದೀನ್.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.