‘ನಾವು ಬದುಕುವುದದಕ್ಕೆ ಏನು ಮಾಡಬೇಕು?’ : ಶಿಷ್ಯನ ಪ್ರಶ್ನೆಗೆ ರಾ-ಉಮ್ ಉತ್ತರ

Ra um final

~ ಯಾದಿರಾ
ವಾ-ಐನ್-ಸಾಇಲ್ ಪರಿವ್ರಾಜಕನಾಗಿ ಹೋಗಿದ್ದರಿಂದ ಕಿರಿಯ ಶಿಷ್ಯರನ್ನು ನಿರ್ವಹಿಸುವ ಹೊಣೆಯೂ ರಾ-ಉಮ್ ಮೇಲೆಯೇ ಬಿದ್ದಿತ್ತು.
ಹೊಸತಾಗಿ ಆಶ್ರಮ ಸೇರಿಕೊಳ್ಳುವವರ ಬಳಿ ನೂರಾರು ಪ್ರಶ್ನೆಗಳಿರುತ್ತಿದ್ದವು. ಮತ್ತು ಅವೆಲ್ಲವೂ ಗಹನವಾದ ಪ್ರಶ್ನೆಗಳೇ ಆಗಿರುತ್ತಿದ್ದವು. ಇನ್ನೂ ಕಷ್ಟದ ಸಂಗತಿಯೆಂದರೆ, ಪ್ರಶ್ನೆ ಕೇಳುವ ಶಿಷ್ಯರೆಲ್ಲರೂ ಒಂದು ಗಹನವಾದ ಉತ್ತರವನ್ನೇ ನಿರೀಕ್ಷಿಸುತ್ತಿದ್ದರು. ರಾ-ಉಮ್‌‌ ಮಟ್ಟಿಗೆ ಶಿಷ್ಯರ ಕಲಿಕೆ ಎಂಬುದು ಅನುಭವಜನ್ಯವಾಗಬೇಕಿತ್ತು.

ಇಂಥದ್ದೊಂದು ಸಂದರ್ಭದಲ್ಲಿ ಬಹುಕಾಲದಿಂದ ಆಶ್ರಮದಲ್ಲಿಯೇ ಇದ್ದರೂ ಕಿರಿಯನಾಗಿಯೇ ಉಳಿದಿದ್ದ ಶಿಷ್ಯನೊಬ್ಬ ಪ್ರಶ್ನೆ ಕೇಳಿದ.
‘ನಾವು ಬದುಕುವುದದಕ್ಕೆ ಏನು ಮಾಡಬೇಕು?’

ಈ ಗಹನವಾದ ಪ್ರಶ್ನೆಯನ್ನು ಕೇಳಿಸಿಕೊಂಡ ಹಿರಿ-ಕಿರಿಯ ಶಿಷ್ಯರೆಲ್ಲಾ ರಾ-ಉಮ್ ಸುತ್ತ ನೆರೆದರು. ಅವಳ ಉತ್ತರವೇನಂಬ ಕುತೂಹಲ ಎಲ್ಲರಿಗೂ ಇತ್ತು.

ರಾ-ಉಮ್ ಒಮ್ಮೆ ಶ್ವಾಸವನ್ನು ಒಳಗೆಳೆದುಕೊಂಡು ಅದನ್ನು ಹಾಗೆಯೇ ಹೊರಗೆ ಬಿಟ್ಟಳು.
ಆಮೇಲೆ ಹೇಳಿದಳು, ‘ಇದನ್ನು ಯಾವ ಕಾರಣಕ್ಕೂ ನಿಲ್ಲಿಸದೆ ನಿರಂತರವಾಗಿ ಮಾಡುತ್ತಲೇ ಇರಬೇಕು’

Leave a Reply