ದೀಪದ ಕಂಬದೆತ್ತರಕ್ಕೆ ಹಾರಬಹುದೇ? : ರಾ-ಉಮ್ ಕಥೆಗಳು

Ra um final~ ಯಾದಿರಾ

ವಾ-ಐನ್-ಸಾಇಲ್ ಕೆಲ ಕಾಲ ರಾ-ಉಮ್ ಆಶ್ರಮದಿಂದ ದೂರವಾಗಿದ್ದ. ಇದಕ್ಕೆ ಕಾರಣ ಶಿಷ್ಯರೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದ್ದ ಪರಿವ್ರಾಜಕತ್ವ.

ತಿರುಗಾಟದಲ್ಲಿದ್ದ ವಾ-ಐನ್ ಒಂದು ದಿನ ಹಲವು ಗರಡಿಯಾಳುಗಳು ಸಾಮು ಮಾಡುತ್ತಿದ್ದ ಸ್ಥಳವೊಂದಕ್ಕೆ ಬಂದ. ಎಲ್ಲರೂ ವ್ಯಾಯಾಮದಲ್ಲಿ ನಿರತರಾಗಿದ್ದರು.

ವಾ-ಐನ್‌ನ ಉಡುಪು ಮತ್ತು ಗಡ್ಡವನ್ನು ಕಂಡು ಕಂಡ ಒಬ್ಬ ಗರಡಿಯಾಳಿಗೆ ಈತ ಯಾರೋ ದೊಡ್ಡ ಅನುಭಾವಿಯೇ ಇರಬೇಕು ಅನ್ನಿಸಿತು.
ಅವನು ಹತ್ತಿರ ಬಂದು ಒಂದು ಪ್ರಶ್ನೆ ಕೇಳಿದ, ‘ಗುರುಗಳೇ ನಾನು ಹಲವು ದಿನಗಳಿಂದ ಜಿಗಿಯುವ ಅಭ್ಯಾಸ ಮಾಡುತ್ತಿದ್ದೇನೆ. ಹೀಗೇ ಅಭ್ಯಾಸ ಮುಂದುವರಿಸಿದರೆ ಓ ಅಲ್ಲಿ ಕಾಣುವ ದೀಪದ ಕಂಬದೆತ್ತರಕ್ಕೆ ಹಾರಬಹುದೇ?’

ವಾ-ಐನ್ ಸ್ವಲ್ಪವೂ ಆಲೋಚಿಸದೆ, ‘ಹೌದು. ಅದೊಂದು ಸಾಧ್ಯತೆ ಮಾತ್ರ ಇರುವುದು. ನೀನು ದೀಪದ ಕಂಬದ ಎತ್ತರಕ್ಕೆ ಜಿಗಿಯಬಹುದು’ ಎಂದ.
ಆ ಗರಡಿಯಾಳು ಸಂತೋಷದಲ್ಲಿ ತನ್ನ ಅಭ್ಯಾಸ ಮುಂದುವರಿಸಿದ.

ಈ ಮಾತುಕತೆಯನ್ನು ಕೇಳುತ್ತಿದ್ದ ಮತ್ತೊಬ್ಬ ಗರಡಿಯಾಳು ಬಂದು ಕೇಳಿದ, ‘ಅದು ಹೇಗೆ ಅಷ್ಟು ಖಡಾಖಂಡಿತವಾಗಿ ಅದೊಂದೇ ಸಾಧ್ಯತೆ ಇರುವುದು ಎಂದು ಹೇಳಿದಿರಿ?’
ವಾ-ಐನ್ ಹೇಳಿದ, ‘ಹೌದು ದೀಪದ ಕಂಬದ ಎತ್ತರಕ್ಕೆ ಅವನಷ್ಟೇ ಜಿಗಿಯಬಹುದು. ಆ ಕಂಬವಂತೂ ಜಿಗಿಯುವುದಿಲ್ಲ!’

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.