ಒಂದೂರಿನಲ್ಲಿ ಒಂದು ಆನೆ ಸೇತುವೆ ಮೇಲಿಂದ ಕಾಡಿನ ಕಡೆ ಹೋಗುತ್ತಾ ಇತ್ತು. ಆ ಸೇತುವೆ ಬಹಳ ಹಳೆಯದು. ಆನೆ ಕಾಲಿಡುತ್ತಲೇ ಗಡಗಡ ಅಲ್ಲಾಡಲು ಶುರು ಮಾಡಿತು. ಆನೆ “ಇದೇನಿದು! ಸೇತುವೆ ಅಲ್ಲಾಡ್ತಿದೆಯಲ್ಲ… ದಾಟುವ ತನಕ ಬೀಳದಿದ್ದರೆ ಸಾಕು!” ಅಂತ ತನಗೆ ತಾನೆ ಹೇಳಿಕೊಂಡಿತು.
ಆ ಆನೆಯ ತಲೆಮೇಲೊಂದು ನೊಣ ಕುಳಿತಿತ್ತು. ಆನೆಯ ಮಾತು ಕೇಳಿ, “ಹೌದು ಮಗನೇ. ಈ ಸೇತುವೆ ನಮ್ಮಿಬ್ಬರ ಭಾರ ತಡೆಯಲಾರದು. ಹೇಗೋ ದಾಟಿಕೊಂಡರೆ ಸಾಕು” ಅಂದಿತು.
ಆನೆಗೆ ಅಚ್ಚರಿ. ತಲೆಮೇಲಿಂದ ಮಾತಾಡ್ತಿರೋದು ಯಾರು? ನನ್ನನ್ನು ‘ಮಗನೇ’ ಎಂದು ಕರೆಯುತ್ತಿರುವ ಮಹಾತಾಯಿ ಯಾರು!?
ಕೇಳಿದಾಗ ಪುಟ್ಟ ನೊಣ ಕೆಳಗೆ ಹಾರಿ ಬಂದು ಆನೆಯ ಕಣ್ಣಿಗೆ ಕಾಣಿಸಿಕೊಂಡಿತು. ಅದನ್ನು ನೋಡಿದ ಆನೆ ತನ್ನ ಗಾಂಭೀರ್ಯ ಬಿಟ್ಟುಕೊಡದೆ, “ಹೌದು ಅಮ್ಮಾ. ಈ ಸೇತುವೆ ನಮ್ಮಿಬ್ಬರ ಭಾರ ತಡೆಯಲಾರದು” ಅನ್ನುತ್ತಾ ತನ್ನ ನಡಿಗೆ ಮುಂದುವರಿಸಿತು.
Advertisements
Beautiful story
LikeLike
ಧನ್ಯವಾದ
LikeLike