ಅಹಂಕಾರ ಶಕ್ತಿಯಲ್ಲ, ಅದೊಂದು ಅವಸ್ಥೆ : ಓಶೋ ವಿಚಾರ

ಅಹಂಕಾರ ಶಕ್ತಿಯಲ್ಲ. ಅದು ಆತ್ಮವನ್ನು ಕವಿದಿರುವ ಅಜ್ಞಾನರೂಪಿಯಾದ ಒಂದು ಪರದೆಯಾಗಿದೆ. ಈ ಅಜ್ಞಾನವು ಹಲವಕ್ಕೆ ಜನ್ಮ ನೀಡಬಲ್ಲದು. ಆ ಹಲವನ್ನು ವಿನಾಶಾತ್ಮಕ ದಾರಿಗಳಲ್ಲಿ ಉಪಯೋಗಿಸಿದಾಗ ಅಹಂಕಾರವು ಇನ್ನೂ ಸಬಲಗೊಳ್ಳುವುದು | ಓಶೋ ರಜನೀಶ್

osho

ಕಾಮ ಕ್ರೋಧಾದಿ ಶಕ್ತಿಗಳನ್ನು ಕೂಡಾ ಸೃಜನಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದು. ಆದರೆ ಅಹಂಕಾರವನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲಾಗದು. ಕಾಮ ಕ್ರೋಧಾದಿಗಳು ಆಗೊಮ್ಮೆ, ಈಗೊಮ್ಮೆ ಹುಟ್ಟಿ ಸತ್ತರೆ ಅಹಂಕಾರ ಸದಾಕಾಲ ನಮ್ಮೊಂದಿಗೇ ಇರುವುದು. ಸಮಾಧಿಯ ಅನುಭವವುಂಟಾಗುವವರೆಗೂ ಅಹಂಕಾರಕ್ಕೆ ಸಾವಿಲ್ಲ. ಆದ್ದರಿಂದ ಅಹಂಕಾರ ನಮಗೆ ಶಕ್ತಿಯಲ್ಲ, ಅದು ನಮ್ಮ ಅವಸ್ಥೆ.

ಅಹಂಕಾರ ನಮ್ಮ ಪ್ರತಿಯೊಂದು ಕೆಲಸದ ಹಿಂದೆಯೂ ನಿಂತು ಕೆಲಸ ಮಾಡುತ್ತಿರುತ್ತದೆ. ಅದು ಹಲವಕ್ಕೆ ಜನ್ಮ ನೀಡುವುದಾದರೂ ಅದಕ್ಕೊಂದು ಧರ್ಮವಿಲ್ಲ. ಹೆಚ್ಚು ಅಹಂಕಾರವುಳ್ಳವರಿಗೆ ಹೆಚ್ಚು ಕೋಪ ಬರುತ್ತದೆ. ಹೆಚ್ಚು ಅಹಂಕಾರ ಉಳ್ಳವರು ಹೆಚ್ಚು ಮಹತ್ವಾಕಾಂಕ್ಷಿಗಳಾಗಿರುತ್ತಾರೆ. ಅಜ್ಞಾನ ಇರುವಷ್ಟೂ ಕಾಲ ಅಹಂಕಾರ ನಮ್ಮೊಂದಿಗೆ ಇರುತ್ತದೆ. ಜ್ಞಾನದೊಂದಿಗೆ ಅಹಂಕಾರ ಲಯವಾಗಿ ಆ ಜಾಗದಲ್ಲಿ ಆತ್ಮದ ದರ್ಶನವಾಗುತ್ತದೆ.

ಅಹಂಕಾರ ಶಕ್ತಿಯಲ್ಲ. ಅದು ಆತ್ಮವನ್ನು ಕವಿದಿರುವ ಅಜ್ಞಾನರೂಪಿಯಾದ ಒಂದು ಪರದೆಯಾಗಿದೆ. ಈ ಅಜ್ಞಾನವು ಹಲವಕ್ಕೆ ಜನ್ಮ ನೀಡಬಲ್ಲದು. ಆ ಹಲವನ್ನು ವಿನಾಶಾತ್ಮಕ ದಾರಿಗಳಲ್ಲಿ ಉಪಯೋಗಿಸಿದಾಗ ಅಹಂಕಾರವು ಇನ್ನೂ ಸಬಲಗೊಳ್ಳುವುದು. ಹಾಗಲ್ಲದೆ ಆ ಹಲವನ್ನು ಸೃಜನಾತ್ಮಕವಾಗಿ ಬಳಸಿಕೊಂಡಾಗ ಅಹಂಕಾರವು ಸಂಪೂರ್ಣವಾಗಿ ನಿರಸನಗೊಳ್ಳುವುದು. ಹೀಗೆ ಅಹಂಕಾರದ ಹೊಗೆ ಕಡಿಮೆಯಾದಾಗ ಆ ಹೊಗೆಯೊಳಗೆ ಹುದುಗಿ ಬೆಳಗುತ್ತಿದ್ದ ಆತ್ಮವೆಂಬ ದೀಪವನ್ನು ಆವರಿಸಿಕೊಂಡಿರುತ್ತದೆ. ಅಹಂಕಾರ ನಿರಸನವಾದಾಗ, ನಾನು ಇದ್ದೇನೆ ಎಂಬ ಭಾವವೂ ಇಲ್ಲವಾಗಿ ನಿಜದ ದರ್ಶನವಾಗುತ್ತದೆ.  

Leave a Reply