ನೈಜ ಧಾರ್ಮಿಕತೆಯ 10 ಲಕ್ಷಣಗಳಿವು… ನೀವೆಷ್ಟು ಧಾರ್ಮಿಕರು? ಪರೀಕ್ಷಿಸಿಕೊಳ್ಳಿ!

ಯಾವುದು ಆತ್ಮೋದ್ಧಾರಕ್ಕಾಗಿಯೂ ಪರಹಿತಕ್ಕಾಗಿಯೂ  ಆಚರಿಸಲ್ಪಡುತ್ತದೆಯೋ ಅದು ಧರ್ಮ. ಇದಕ್ಕೆ ಶಾಸ್ತ್ರಾಧಾರವಿಲ್ಲ. ನಿಯಮ – ನಿರ್ಬಂಧಗಳಿಲ್ಲ. ಧರ್ಮ ಎಂದರೆ ಮನುಷ್ಯರು ಅತ್ಯಗತ್ಯವಾಗಿ ಧರಿಸಬೇಕಾದ ಗುಣ. ಸಹಜವಾಗಿ ನಡೆಸಬೇಕಾದ, ಒಳಗೊಳಿಸಿಕೊಳ್ಳಬೇಕಾದ ಕರ್ತವ್ಯ. ಈ ಧರ್ಮ religion ಅರ್ಥದಲ್ಲಿ ಹೇಳಲಾಗುವ ಧರ್ಮವಲ್ಲ. ಈ ಸಹಜತೆಗೆ ಹೆಸರಿಲ್ಲ. ಇದು ಆಚರಣೆಯಲ್ಲಿ, ನಡವಳಿಕೆಯಲ್ಲಿ ವ್ಯಕ್ತವಾಗುವಂಥದ್ದು. ಇದನ್ನು ಗುರುತಿಸಲು ಈ ಕಿರುಚಿತ್ರಿಕೆಯಲ್ಲಿರುವ 10 ಲಕ್ಷಣಗಳು ಸಹಾಯ ಮಾಡಬಹುದು. 

ನಿಮ್ಮಲ್ಲಿ ಈ 10 ಲಕ್ಷಣಗಳಿದ್ದರೆ ನೀವು ನಿಜವಾದ ಧಾರ್ಮಿಕರು. ಇವು ಅಲ್ಪ ಪ್ರಮಾಣದಲ್ಲಾದರೂ ಇದ್ದರೆ, ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ಧರ್ಮಭೀರುಗಳು. ಈ ಲಕ್ಷಣಗಳಲ್ಲಿ ಕೆಲವಾದರೂ ಇದ್ದರೆ, ಧಾರ್ಮಿಕರಾಗುವ ಅವಕಾಶ ನಿಮಗೆ ಇದ್ದೇ ಇದೆ. ಇವುಗಳಲ್ಲಿ ಯಾವುದೂ ನಿಮ್ಮಲ್ಲಿ ಇಲ್ಲವಾದರೆ; ಚಿಂತೆ ಬೇಡ, ರೂಢಿಸಿಕೊಳ್ಳಲು ಇನ್ನೂ ಸಮಯವಿದೆ. 

 

Leave a Reply