ನಿಮ್ಮ ಆಲೋಚನೆಗಳು ನಿಮ್ಮ ವಿಧಿಯನ್ನು ರೂಪಿಸುವವು : ಬೆಳಗಿನ ಹೊಳಹು

ನೀವು ಏನನ್ನು ಆಲೋಚಿಸುತ್ತೀರೋ ನೀವು ಅದೇ ಆಗಿಬಿಡುತ್ತೀರಿ. ಮತ್ತು ನೀವು ಏನಾಗುತ್ತೀರೋ ಅದರಂತೆ ನಡೆದು ನಿಮ್ಮ ವಿಧಿಯನ್ನು ಹೊಂದುತ್ತೀರಿ. ಆದ್ದರಿಂದ ನಿಮ್ಮ ಆಲೋಚನೆಗಳನ್ನು ಶುದ್ಧವಾಗಿಟ್ಟುಕೊಳ್ಳಿ ಅನ್ನುತ್ತದೆ ಉಪನಿಷತ್ ವಾಕ್ಯ. 

upanishat

ನಿಮ್ಮ ಅಲೋಚನೆಗಳ ಮೇಲೆ ನಿಗಾ ವಹಿಸಿ; ಅವು ನಿಮ್ಮ ಮಾತುಗಳಾಗಿ ಹೊಮ್ಮುವವು.
ನಿಮ್ಮ ಮಾತುಗಳ ಮೇಲೆ ನಿಗಾ ವಹಿಸಿ; ಅವೇ ನಿಮ್ಮ ಕೃತಿಯಾಗುವವು.
ನಿಮ್ಮ ಕೃತಿಗಳ ಮೇಲೆ ನಿಗಾ ವಹಿಸಿ; ಅವು ನಿಮಗೆ ಅಭ್ಯಾಸವಾಗಿಬಿಡುವವು.
ನಿಮ್ಮ ಅಭ್ಯಾಸಗಳ ಮೇಲೆ ನಿಗಾ ವಹಿಸಿ; ಅವು ನಿಮ್ಮ ಚಾರಿತ್ರ್ಯ ಸಾರುವವು.
ನಿಮ್ಮ ಚಾರಿತ್ರ್ಯದ ಮೇಲೆ ನಿಗಾ ವಹಿಸಿ; ಅವು ನಿಮ್ಮ ವಿಧಿಯನ್ನು ರೂಪಿಸುವವು.
ನಿಮ್ಮ ಅಂತರಂಗದ ಅಳದಲ್ಲಿ ನಿಮ್ಮನ್ನು ಆಳುತ್ತಿರುವ ಬಯಕೆ ಏನಿದೆಯೋ, ನೀವು ಅದೇ ಆಗುವಿರಿ.
ನಿಮ್ಮ ಬಯಕೆಯಂತೆ ನಿಮ್ಮ ವರ್ತನೆ ಇರುವುದು.
ನಿಮ್ಮ ವರ್ತನೆಗೆ ತಕ್ಕಂತೆ ನೀವು ಕರ್ಮಗಳನ್ನು ಮಾಡುವಿರಿ.
ನಿಮ್ಮ ಕರ್ಮಗಳಂತೆ ನಿಮ್ಮ ವಿಧಿಯು ರೂಪುಗೊಳ್ಳುವುದು.

~ ಉಪನಿಷತ್  ಚಿಂತನೆ

2 Comments

  1. ಅರಳಿಮರ ಎಂದೂ ದೃಢವೇ.ಬೃಹತ್ ಆದದ್ದು.ಉದ್ದ ಅಗಲ ಗಾತ್ರದಲ್ಲಿ ತನಗೇ ತಾನೇ ಸಾಟಿ.ಇದೇ ತಮ್ಮ ವಿಶ್ಲೇಷಣೆ. ಸಾಮರ್ಥ್ಯ.
    ನಮಸ್ತೆ.

Leave a Reply