ಮುಲ್ಲಾ ನಸ್ರುದ್ದೀನನಿಗೆ ಕರಡಿಗಳೆಂದರೆ ಭಾರಿ ಭಯ. ಒಂದು ದಿನ ರಾಜ್ಯದ ಸುಲ್ತಾನ ಕರಡಿ ಬೇಟೆಗೆ ತನ್ನೊಡನೆ ಬರುವಂತೆ ನಸ್ರುದ್ದೀನ ನನ್ನು ಆಹ್ವಾನಿಸಿದ.
ತನ್ನ ಕರಡಿಗಳ ಕುರುತಾದ ಭಯವನ್ನು ಸುಲ್ತಾನನಿಗೆ ಹೇಗೆ ಹೇಳುವುದು ಎಂದು ಗೊತ್ತಾಗದೆ, ನಸ್ರುದ್ದೀನ್ ಹೆದರಿಕೆಯಿಂದಲೇ ಸುಲ್ತಾನನಿಗೆ ಒಪ್ಪಿಗೆ ಕೊಟ್ಟುಬಿಟ್ಟ.
ಬೇಟೆ ಮುಗಿಸಿ ಹಿಂತಿರುಗಿದ ನಸ್ರುದ್ದೀನ ನನ್ನು ಅವನ ಗೆಳೆಯ ಪ್ರಶ್ನೆ ಮಾಡಿದ, “ ಹೇಗಿತ್ತು ಕರಡಿ ಬೇಟೆ? “
“ ಅದ್ಭುತವಾಗಿತ್ತು“ ನಸ್ರುದ್ದೀನ್ ಉತ್ತರಿಸಿದ.
“ ಹೌದಾ, ಎಷ್ಟು ಕರಡಿಗಳು ಸಿಕ್ಕವು?” ಗೆಳೆಯ ತಿರುಗಿ ಪ್ರಶ್ನೆ ಮಾಡಿದ.
“ ಒಂದೂ ಇಲ್ಲ” ಉತ್ತರಿಸಿದ ನಸ್ರುದ್ದೀನ.
“ ಮತ್ತೆ ಯಾಕೆ ಹೇಳಿದೆ? ಬೇಟೆ ಅದ್ಭುತವಾಗಿತ್ತು ಅಂತ?” ಗೆಳೆಯನ ಪ್ರಶ್ನೆ.
“ ಕರಡಿಗಳನ್ನು ಕಂಡರೆ ಹೆದರಿ ಸಾಯುವವನಿಗೆ ಒಂದು ಕರಡಿಯೂ ಕಾಣಿಸಲಿಲ್ಲವೆಂದರೆ , ಅದು ಅವನಿಗೆ ಅದ್ಭುತವೇ ಅಲ್ವ?” ಮುಲ್ಲಾ ನಗುತ್ತ ಉತ್ತರಿಸಿದ.
ತುಂಬಾ ಆಹ್ಲಾದಕರ ಅನುಭವಗಳನ್ನು ಕೊಡುತ್ತಿವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಾನೀಗ ಮುಲ್ಲಾ ನಸೀರುದ್ದೀನನ ಅಭಿಮಾನಿಯಾಗಿದ್ದೇನೆ
ತುಂಬಾ ಉಪಯುಕ್ತ ಚೇತೋಹಾರಿ ಬರಹಗಳು ಧನ್ಯವಾದಗಳು