“ಎಲ್ಲರನ್ನೂ ಖುಷಿ ಪಡಿಸಬೇಕು ಅನ್ನುವ ಯೋಚನೆ ನಿಮ್ಮದಾಗಿದ್ದರೆ, ನಾಯಕರಾಗುವ ಕನಸು ಬಿಟ್ಟುಬಿಡಿ; ಐಸ್ ಕ್ರೀಮ್ ವ್ಯಾಪಾರ ಶುರುಹಚ್ಚಿಕೊಳ್ಳಿ!!” ~ ಸ್ಟೀವ್ ಜಾಬ್ಸ್
ಯಾವಾಗಲೂ ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಿಲ್ಲ. ನಾವೂ ಸೇರಿದಂತೆ ಪ್ರತಿಯೊಬ್ಬರೂ ಮತ್ತೊಬ್ಬರ ಮೇಲೆ ನಮ್ಮದೇ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ಯಾವ ವ್ಯಕ್ತಿಯಿಂದಲೂ ತನ್ನ ಮೇಲಿನ ಎಲ್ಲ ನಿರೀಕ್ಷೆಗಳನ್ನು ಈಡೇರಿಸುವುದು ಸಾಧ್ಯವಿಲ್ಲ.
“ಐಸ್ ಕ್ರೀಂ ಅಂಗಡಿಯಲ್ಲಿ ವಿವಿಧ ಗ್ರಾಹಕರಿಗಾಗಿ ವಿವಿಧ ಫ್ಲೇವರಿನ ಐಸ್ ಕ್ರೀಂ ಇಟ್ಟಿರುತ್ತಾರೆ. ಯಾರಿಗೆ ಯಾವುದು ಬೇಕೋ ಅದನ್ನು ಕೊಡುತ್ತಾರೆ. ಹಾಗೆ ನಾವು ಕೂಡಾ ಯಾರಿಗೇನು ಬೇಕೋ ಅದನ್ನು ಒದಗಿಸುತ್ತ ಕುಳಿತರೆ ನಮ್ಮ ಬೆಳವಣಿಗೆಯತ್ತ ಗಮನ ಕೊಡುವುದು ಯಾವಾಗ?” – ಇದು ಸ್ಟೀವ್ ಜಾಬ್ಸ್ ಮಾತಿನ ಅಂತರಾರ್ಥ.
ಆದ್ದರಿಂದ, ನಮ್ಮಿಂದ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಮಾಡಬೇಕು. ನಮ್ಮ ಜವಾಬ್ದಾರಿಯಾಚೆಗೂ ಜನ ನಮ್ಮ ಮೇಲೆ ನಿರೀಕ್ಷೆ ಹೊರಿಸುತ್ತಿದ್ದರೆ, ಅದರತ್ತ ಗಮನ ಕೊಡದೆ ನಮ್ಮ ಬೆಳವಣಿಗೆಯ ದಾರಿಯಲ್ಲಿ ಮುಂದೆ ಸಾಗಬೇಕು. ಆಗ ಮಾತ್ರ ಹಾಗೆಯೇ, ನಾವು ಕೂಡ ಬೇರೆಯವರ ಮೇಲೆ ನಿರೀಕ್ಷೆ ಹೇರುವುದನ್ನು ಬಿಡಬೇಕು.