ಶರೀರವೇ ದೇವಮಂದಿರ : ಮೈತ್ರೇಯಿ ಉಪನಿಷತ್

ವೇದಕಾಲದ ಬ್ರಹ್ಮವಾದಿನಿ ಮೈತ್ರೇಯಿ, ಯಾಜ್ಞವಲ್ಕ್ಯರ ಪತ್ನಿಯೂ ಆಗಿದ್ದಳು. ‘ಮೈತ್ರೇಯಿ ಉಪನಿಷತ್’ ರಚಿಸುವ ಮೂಲಕ ಮೊದಲ ಮಹಿಳಾ ಉಪನಿಷತ್ಕಾರಳೆಂದೂ ಖ್ಯಾತಿ ಪಡೆದಿರುವಳು ~ ಅಪ್ರಮೇಯ

 

maitreyi 1

ದೇಹಃ ದೇವಾಲಯಃ ಪ್ರೋಕ್ತಃ ಸಃ ಜೀವಃ ಕೇವಲಃ ಶಿವಃ |
ತ್ಯಜೇತ್ ಅಜ್ಞಾನನಿರ್ಮಾಲ್ಯಮ್ ಸಃ ಅಹಮ್ ಭಾವೇನ ಪೂಜಯೇತ್ ||2. 1 ||

ಅರ್ಥ:  ಶರೀರವೇ ದೇವಮಂದಿರವಾಗಿದೆ, ಜೀವನೇ ಪರಮಾತ್ಮನಾಗಿದ್ದಾನೆ. ಅಜ್ಞಾನವೆನ್ನುವ ನೈರ್ಮಾಲ್ಯವನ್ನು (ಪೂಜೆಗಿಟ್ಟ ಹೂವಿನ ಅವಶೇಷಗಳು – ಪ್ರಸಾದ) ನಿವಾರಿಸಿಕೊಂಡು ಪರಮಾತ್ಮನೇ ನಾನು ಎನ್ನುವ ಅಭೇದ ಜ್ಞಾನದಿಂದ ಪೂಜೆ ಮಾಡಬೇಕು. [ 2.1]

ತಾತ್ಪರ್ಯ: ಭಗವಂತನನ್ನು ನಮಗಿಂತ ಪ್ರತ್ಯೇಕವಾಗಿ ಕಂಡು ಪೂಜಿಸುತ್ತೇವೆ. ಇದು ಅಜ್ಞಾನ. ಇದನ್ನು ನಿವಾರಿಸಿಕೊಂಡು, ನಮ್ಮ ದೇಹವೇ ದೇವಾಲಯ, ಜೀವವೇ ಶಿವನೆಂದು ಭಾವಿಸಿ ನಮ್ಮನ್ನು ನಾವು ಗೌರವದಿಂದ ನಡೆಸಿಕೊಳ್ಳಬೇಕು. ನಮ್ಮ ಸನ್ನಡತೆಯೇ ನಮ್ಮೊಳಗಿನ ಭಗವಂತನ ಪೂಜೆಯೆಂದು ಭಾವಿಸಬೇಕು.
ನಂತರದಲ್ಲಿ ಬಸವಣ್ಣನವರು “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಸವಯ್ಯಾ” ಎಂದು ಹೇಳಿರುವುದನ್ನು ಇಲ್ಲಿ ನೆನೆಯಬಹುದು.

Leave a Reply