ಭಕ್ತ ಸಿರಿಯಾಳ ಶಿವನಿಗೆ ಮಗನನ್ನು ಉಣಬಡಿಸಿದ ಕಥೆ

ಶಿವ ಸಿರಿಯಾಳನ ಭಕ್ತಿಯನ್ನು ಪರೀಕ್ಷಿಸಲು  ವೇಷ ಮರೆಸಿಕೊಂಡು ಬಂದು, “ನಿನ್ನ ಮಗನನ್ನೇ ಅಟ್ಟುಣಿಸು” ಎಂದು ತಾಕೀತು ಮಾಡಿದ. ಆಗ ಸಿರಿಯಾಳ ಏನು ಮಾಡಿದನೆಂದು ನೀವು ಊಹಿಸಲು ಸಾಧ್ಯವೇ? 

ಒಂದಾನೊಂದು ಕಾಲದಲ್ಲಿ ಸಿರಿಯಾಳನೆಂಬ ಶ್ರೇಷ್ಠ ಶಿವಭಕ್ತನಿದ್ದನು. ಅವನ ಶಿವಭಕ್ತಿ ಲೋಕಪ್ರಸಿದ್ಧವಾಗಿತ್ತು.
ಆದರೂ ಶಿವನೊಗೆ ಒಮ್ಮೆ ತನ್ನ ಭಕ್ತನನ್ನು ಪರೀಕ್ಷಿಸಬೇಕೆಂಬ ಮನಸಾಯಿತು. ಅದಕ್ಕಾಗಿ ಜಂಗಮನಂತೆ ವೇಷ ಮರೆಸಿಕೊಂಡು ಸಿರಿಯಾಳನ ಮನೆಗೆ ಬಂದನು. ತನಗೆ ಹಸಿವಾಗಿದೆ ಎಂದೂ ಉಣ್ಣಲು ಏನಾದರೂ ಕೊಡೆಂದೂ ಕೇಳಿದನು.

ಆ ಕ್ಷಣದಲ್ಲಿ ಸಿರಿಯಾಳನ ಮನೆಯಲ್ಲಿ ಹಿಡಿ ಅಕ್ಕಿಗೂ ತತ್ವಾರವಿತ್ತು. ಇತ್ತ ಜಂಗಮ ವೇಷದ ಶಿವನು ತನ್ನ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ “ಹಸಿವು… ಹಸಿವು…” ಎಂದು ಕ್ರೋಧಗೊಳ್ಳುತ್ತಿದ್ದನು.
ಕೊನೆಗೆ ದಿಕ್ಕು ತೋಚದೆ ಸಿರಿಯಾಳನು ತನ್ನ ಮಗನನ್ನು ಕೊಂದು, ಬೇಯಿಸಿ, ಅಡುಗೆ ಮಾಡಿ, ಅದನ್ನೇ ಜಂಗಮನಿಗೆ ಉಣಬಡಿಸಿದನು.

ಸಂತೃಪ್ತನಾಗಿ ಉಂಡ ಜಂಗಮನು ಸಿರಿಯಾಳನ ಅತಿಥಿಸೇವೆಯನ್ನು ಕೊಂಡಾಡಿದನು.
ನಂತರದಲ್ಲಿ ಸಂತುಷ್ಟನಾಗಿ “ಅತಿಥಿಗಳನ್ನು ಸಂತೈಸುವವನೇ ಶಿವಭಕ್ತ”ನೆಂದು ಘೋಷಿಸಿ, ಸಿರಿಯಾಳನಿಗೆ ಆಶೀರ್ವಾದ ನೀಡಿದನು. ಅವನ ಮಗನನ್ನೂ ಬದುಕಿಸಿಕೊಟ್ಟನು.

ಆಧಾರ : ಚನ್ನಬಸವೇಕ ವಿಜಯಂ (ಇದೇ ಕೃತಿಯು ಮನುಶೋಳ ಎಂಬ ಶಿವಭಕ್ತನೂ ಹೀಗೆ ಮಗನನ್ನು ಕೊಂದು ಭಗವಂತನಿಗೆ ಉಣ್ಣಲಿಕ್ಕಿದ ಬಗ್ಗೆ ಹೇಳುತ್ತದೆ)

Leave a Reply