ಈ ರಜೆಯಲ್ಲಿ ನೀವು ಓದಬಹುದಾದ 25 ಪುಸ್ತಕಗಳು : ಅರಳಿಮರ recommends

ಕಣ್ಣೆದುರು ಕಾಯುತ್ತಿರುವ ರಜಾದಿನಗಳನ್ನು ಕಳೆಯಲು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಾಹಿತ್ಯವುಳ್ಳ 25 ಕನ್ನಡ ಪುಸ್ತಕಗಳನ್ನಿಲ್ಲಿ ನೀಡಲಾಗಿದೆ. 

ಪುಸ್ತಕ ಓದಲು ರಜಾದಿನಗಳೇ ಬರಬೇಕೆಂದಿಲ್ಲ. ಪ್ರಯಾಣಿಸುವಾಗ, ಸುಮ್ಮನೆ ಸಮಯ ಪೋಲು ಮಾಡುವಾಗ, ಟೈಂ ಪಾಸ್ ಆಗುತ್ತಿಲ್ಲ ಎಂದು ಗೊಣಗುವಾಗೆಲ್ಲ ಪುಸ್ತಕ ಓದಬಹುದು. ಇನ್ನೂ ಹೇಳಬೇಕೆಂದರೆ, ಪುಸ್ತಕ ಓದುವ ಹವ್ಯಾಸ ಇರುವವರಿಗೆ ಸಮಯ ಪೋಲು ಮಾಡುವ, ಬೇಸರ ಪಡುವ ಪ್ರಮೇಯವೇ ಬರುವುದಿಲ್ಲ. 

ಆದರೂ ಕಣ್ಣೆದುರು ಕಾಯುತ್ತಿರುವ ರಜಾದಿನಗಳನ್ನು ಕಳೆಯಲು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಾಹಿತ್ಯವುಳ್ಳ 25 ಕನ್ನಡ ಪುಸ್ತಕಗಳನ್ನಿಲ್ಲಿ ನೀಡಲಾಗಿದೆ. 

ಇಲ್ಲಿ ಎಲ್ಲ ವಿಭಾಗಗಳ ಪುಸ್ತಕಗಳೂ ಸೇರಬೇಕೆಂಬ ಉದ್ದೇಶದಿಂದ ಆಯಾ ವಿಭಾಗದ ಸರಳ, ಪರಿಣಾಮಕಾರಿ ಮತ್ತು ಆಸಕ್ತಿಕರ ಕೃತಿಗಳನ್ನಿಲ್ಲಿ ಆಯ್ಕೆ ಮಾಡಲಾಗಿದೆ. ಪಟ್ಟಿ ಮಾಡುತ್ತಾ ಹೋದರೆ ಇದು ಮುಗಿಯದ ಸಾಲು. ಆದರೂ ಮೊದಲ ಹಂತಕ್ಕೆ ಇವಿಷ್ಟು. 

ಈ ಪುಸ್ತಕಗಳು ಸಪ್ನಾ ಹಾಗೂ ನವಕರ್ನಾಟಕ (ಮಳಿಗೆ ಮತ್ತು ಆನ್’ಲೈನ್), ರಾಮಕೃಷ್ಣಾಶ್ರಮದ ಆವರಣದಲ್ಲಿರುವ ಮಳಿಗೆ ಮತ್ತು ವೇದಾಂತ ಬುಕ್ ಹೌಸ್’ಗಳಲ್ಲಿ ಸಿಗುತ್ತವೆ. ಅಂಕಿತ ಪುಸ್ತಕ ಮಳಿಗೆಯಲ್ಲಿ ತಾವೋ, ಝೆನ್ ಕಥೆಗಳ ಪುಸ್ತಕ ಸಿಗುತ್ತವೆ. 

1 ಶರಣ ಚರಿತಾಮೃತ : ಸಂ – ಡಾ.ಸಿದ್ದಯ್ಯ ಪುರಾಣಿಕ

2 ಬದುಕಲು ಕಲಿಯಿರಿ : ಸ್ವಾ.ಜಗದಾತ್ಮಾನಂದ

3 ಮಾತುಕತೆ : ರಮಣ ಮಹರ್ಷಿಗಳೊಡನೆ ಸಂವಾದ ಸಂಗ್ರಹ

4 ರಾಮಕೃಷ್ಣ ವಚನವೇದ

5 ದೇವರು : ಅ.ನಾ.ಮೂರ್ತಿರಾವ್

6 ಚಾರ್ವಾಕ ದರ್ಶನ : ಗೌರೀಶ ಕಾಯ್ಕಿಣಿ

7 ಭಾರತ ಒಂದು ಸನಾತನ ಯಾತ್ರೆ : ಓಶೋ ರಜನೀಶ್

8 ಮಹರ್ಷಿ ದಯಾನಂದ ಸರಸ್ವತಿ : ಜೀವನ – ಸಾಧನೆ

9 ಸೂಫಿ ಪ್ರೇಮ ಕಾವ್ಯ : ಸಂ : ಮ.ಸು.ಕೃಷ್ಣಮೂರ್ತಿ

10 ದಾವ್ : ತಾವೋ ಚಿಂತನೆಗಳನ್ನು ಪರಿಚಯಿಸುವ ಪುಸ್ತಕ

11 ಭಾರತೀಯ ಸಂಸ್ಕೃತಿ : ಸಾನೆ ಗುರೂಜಿ

12 ಗುರುವಿನೊಡನೆ ದೇವರಡಿಗೆ : ಕುವೆಂಪು

13 ವಚನ ಭಾಗವತ : ತ.ಸು.ಶಾಮರಾಯ

14 ಗೋಲ್ಗೊಥಾ ಖಂಡ ಕಾವ್ಯ (ಗೋವಿಂದ ಪೈ)

15 ಓದಿರಿ (ಬೊಳುವಾರು ಮಹಮದ್ ಕುಂಞಿ)

16 ಉಮ್ಮಾ (ಬೊಳುವಾರು ಮಹಮದ್ ಕುಂಞಿ)

17 ಮಹಾಭಾರತದ ಕಥೆಗಳು : (ಸಂಗ್ರಹ) ವೈ ಎನ್ ಗುಂಡೂರಾವ್

18 ವಿವೇಕಾನಂದ ಕೃತಿಶ್ರೇಣಿ (ಸರಣಿ)

19 ಧಮ್ಮಪದ ಗಾಥಾ ಪ್ರಸಂಗಗಳು (ಸರಣಿ)

20 ಕೃಷ್ಣಾವತಾರ (ಸರಣಿ)

21 ಪರಮಾತ್ಮಾನುಭವದ ಮಹಾರಣ್ಯಗಳಲ್ಲಿ (ಸ್ವಾ.ರಾಮತೀರ್ಥ ಚಿಂತನ ಸರಣಿ)

22 ಪಂಚತಂತ್ರದ ಕಥೆಗಳು

23 ಮುಲ್ಲಾ ನಸ್ರುದ್ದೀನ್ ಕಥೆಗಳು

24 ಝೆನ್ ಕಥೆಗಳು

25 ಸೂಫಿ ಕಥೆಗಳು

ಉಳಿದಂತೆ, ಪ್ರತಿದಿನವೂ ತಪ್ಪದೆ ‘ಅರಳಿಮರ’ದ ಎಲ್ಲ ಲೇಖನಗಳನ್ನೂ ಓದಿ!!

Leave a Reply