ಯಾವ ನಕ್ಷತ್ರದಲ್ಲಿ ಯಾವ ದೇವತೆಯ ಪೂಜೆ? ಏನು ಫಲ ? : ಭವಿಷ್ಯ ಪುರಾಣದ ಸೂಚನೆಗಳು

ಭವಿಷ್ಯ ಪುರಾಣ 102ನೇ ಅಧ್ಯಾಯದಲ್ಲಿ ನಕ್ಷತ್ರಗಳ ಆರಾಧನೆಯನ್ನು ಹೇಗೆ ಆಚರಿಸಬೇಕೆಂದು ವಿವರವಾಗಿ ತಿಳಿಸಿದ್ದಾರೆ. ಅದರಂತೆ ಆಯಾ ನಕ್ಷತ್ರದ ಅಧಿದೇವತೆ, ಮತ್ತು ಪೂಜಾ ಫಲಗಳನ್ನು ಈ ಕೆಳಗಿನಂತೆ ಹೇಳಲಾಗಿದೆ.

ಅವನ್ನು ಓದು ಮುನ್ನ, ಗಮನದಲ್ಲಿಡಬೇಕಾದ ಕೆಲವು ಸಂಗತಿಗಳು ಹೀಗಿವೆ:

ಯಾವುದೇ ಉಪಾಸನೆ (ಪೂಜೆ)ಯನ್ನು ಶ್ರದ್ಧೆಯಿಂದ ಮಾಡಬೇಕು. ನಂಬಿಕೆ ಇಟ್ಟು ಮಾಡಬೇಕು. ಮುಖ್ಯವಾಗಿ, ಸಂಕಲ್ಪಶುದ್ಧಿ ಇರಬೇಕು. ಉಪಾಸಕರು ಮೋಸ, ವಂಚನೆ, ಕಳ್ಳತನ, ಸುಳ್ಳು, ಕಪಟ, ಕಾಮುಕತೆ, ಕೊಲೆಗಟುಕತನ, ಕುತ್ಸಿತ ಬುದ್ಧಿ, ಮತ್ಸರ, ಅಹಂಕಾರದ ದರ್ಪ, ತಾರತಮ್ಯ, ನಕಾರಾತ್ಮಕ ಚಿಂತನೆಯೇ ಮೊದಲಾದ ಕೆಟ್ಟ ಸಂಗತಿಗಳಿಂದ ಮುಕ್ತರಾಗಿರಬೇಕು. ಇವುಗಳಲ್ಲಿ ಯಾವುದೊಂದನ್ನು ಇಟ್ಟುಕೊಂಡು ಪೂಜೆ ಪುನಸ್ಕಾರ ನಡೆಸಿದರೂ ಅದರ ಫಲ ದೊರೆಯುವುದಿಲ್ಲ.

ಹಾಗೆಯೇ, “ಉದ್ಯಮೇನ ಹಿ ಸಿದ್ಧ್ಯನ್ತಿ ಕಾರ್ಯಾಣಿ ನ ಮನೋರಥೈಃ” ಅನ್ನುವ ಮಾತಿನಂತೆ; ಕೇವಲ ನಮ್ಮ ಸಂಕಲ್ಪ, ಬಯಕೆಗಳಿಂದ ಕಾರ್ಯಸಿದ್ಧಿಯಾಗಿಬಿಡುವುದಿಲ್ಲ. ನಮ್ಮ ಪ್ರಯತ್ನ ನಾವು ಹಾಕಲೇಬೇಕಾಗುತ್ತದೆ. ಇದನ್ನು ಮರೆಯಬಾರದು.

ಈಗ ಯಾವ ನಕ್ಷತ್ರಕ್ಕೆ ಯಾವ ಅಧಿದೇವತೆ, ಏನು ಫಲ ನೋಡೋಣ….

ಅಶ್ವಿನಿ ನಕ್ಷತ್ರ : ಅಶ್ವಿನಿ ಕುಮಾರರು.  ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ.

ಭರಣಿ ನಕ್ಷತ್ರ : ಯಮ. ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು.

ಕೃತಿಕಾ ನಕ್ಷತ್ರ : ಅಗ್ನಿ. ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ.

ರೋಹಿಣಿ ನಕ್ಷತ್ರ : ಬ್ರಹ್ಮ. ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ.

ಮೃಗಶಿರ ನಕ್ಷತ್ರ : ಚಂದ್ರ. ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ. 

ಆರಿದ್ರ ನಕ್ಷತ್ರ : ಶಿವ. ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ.

ಪುನರ್ವಸು ನಕ್ಷತ್ರ : ಅದಿತಿ. ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ ಸಂತಾನಾಪೇಕ್ಷಿಗಳು ಸಹಾ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ. 

ಪುಷ್ಯ ನಕ್ಷತ್ರ : ಬೃಹಸ್ಪತಿ. ಪುಷ್ಯ ನಕ್ಷತ್ರದ ದಿವಸ ಬೃಹಸ್ಪತಿಯನ್ನು (ಗುರು) ಪೂಜಿಸಿದರೆ ಹೆಚ್ಚಿನ ವ್ಯವಹಾರಿಕ ಜ್ಞಾನ, ಜಾಣ್ಮೆ ಅಭಿವೃದ್ದಿ ಉಂಟಾಗುತ್ತದೆ.

ಆಶ್ಲೇಷ ನಕ್ಷತ್ರ : ನಾಗ. ಆಶ್ಲೇಷ ನಕ್ಷತ್ರದ ದಿವಸ ನಾಗ (ಸರ್ಪ) ನನ್ನು ಪೂಜಿಸಿದರೆ, ನಾಗದೋಷ ನಿವಾರಣೆಯಾಗುತ್ತದೆ.

ಮಖ ನಕ್ಷತ್ರ : ಪಿತೃ ದೇವತೆ. ಮಖ ನಕ್ಷತ್ರದ ದಿವಸ ಪಿತೃದೇವತೆಯನ್ನು ಪೂಜಿಸಿದರೆ ಧನ, ಸಂತಾನ, ಹಸುಕರುಗಳು ವೃದ್ದಿಯಾಗುತ್ತದೆ.

ಪೂರ್ವಪಲ್ಗುಣಿ ನಕ್ಷತ್ರ : ಪೂಶ ಮಹರ್ಷಿ. ಪೂರ್ವಪಲ್ಗುಣಿ ನಕ್ಷತ್ರದ ದಿವಸ ಪೂಶ ಮಹರ್ಷಿಯನ್ನು ಪೂಜಿಸಿದರೆ, ಅಪೇಕ್ಷಣಿಯ ವಧು/ವರ ಸಿಗುತ್ತಾರೆ. ಧನ ವೃದ್ದಿ ಹಾಗು ಚಟುವಟಿಕೆ ಉಳ್ಳವರಾಗುತ್ತಾರೆ.

ಉತ್ತರಾಪಲ್ಗುಣಿ ನಕ್ಷತ್ರ : ಆರ್ಯಮ ದೇವತೆ. ಉತ್ತರಾಪಲ್ಗುಣಿ ನಕ್ಷತ್ರದ ದಿವಸ ಆರ್ಯಮ ದೇವತೆಯನ್ನು ಪೂಜಿಸಿದರೆ, ಈ ದೇವತೆ ವಿವಾಹ, ಕರಾರುಗಳ ಪೋಷಕ ಹಾಗೂ ಶೌರ್ಯ ಮತ್ತು ದೀನರ ರಕ್ಷಣೆ ಉಂಟಾಗುತ್ತದೆ.

ಹಸ್ತ ನಕ್ಷತ್ರ : ಸೂರ್ಯ. ಹಸ್ತ ನಕ್ಷತ್ರದ ದಿವಸ ಸೂರ್ಯನನ್ನು ಗಂಧ ಹಾಗೂ ಪುಪ್ಪಗಳಿಂದ ಪೂಜಿಸಿದರೆ, ಧನ, ಅಭಿವೃದ್ದಿಯಾಗುತ್ತದೆ ನೆಮ್ಮದಿ ಉಂಟಾಗುತ್ತದೆ. 

ಚಿತ್ತಾ ನಕ್ಷತ್ರ : ತ್ವಷ್ಟ. ಚಿತ್ತಾ ನಕ್ಷತ್ರದ ದಿವಸ ತ್ವಷ್ಟನನ್ನು ಪೂಜಿಸಿದರೆ, ಆರೋಗ್ಯ, ಜ್ಞಾನ, ಆಹಾರ ಧಾನ್ಯ ಅಭಿವೃದ್ದಿ ಉಂಟಾಗುತ್ತದೆ.

ಸ್ವಾತಿ ನಕ್ಷತ್ರ : ವಾಯುದೇವ. ಸ್ವಾತಿ ನಕ್ಷತ್ರದ ದಿವಸ ವಾಯುದೇವನನ್ನು ಪೂಜಿಸಿದರೆ, ದೈವಿಕ ಶಕ್ಷಿಯನ್ನು ನೀಡುತ್ತಾನೆ. 

ವಿಶಾಖಾ ನಕ್ಷತ್ರ : ಇಂದ್ರಾಗ್ನಿ. ವಿಶಾಖಾ ನಕ್ಷತ್ರದ ದಿವಸ ಇಂದ್ರಾಗ್ನಿಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ ಧನಪ್ರಾಪ್ತಿ ಮತ್ತು ಇಷ್ಟಾರ್ಥಗಳು ಈಡೇರುತ್ತವೆ.

ಅನುರಾಧಾ ನಕ್ಷತ್ರ : ಮಿತ್ರದೇವ. ಅನುರಾಧಾ ನಕ್ಷತ್ರ ದಿವಸ ಮಿತ್ರದೇವನನ್ನು ಪೂಜಿಸಿದರೆ, ಲಕ್ಷ್ಮಿ ಒಲಿಯುತ್ತಾಳೆ, ಧೀರ್ಘಾಯುವಾಗುತ್ತಾರೆ. 

ಜೇಷ್ಠಾ ನಕ್ಷತ್ರ : ಇಂದ್ರ. ಜೇಷ್ಠಾ ನಕ್ಷತ್ರದ ದಿವಸ ಇಂದ್ರನನ್ನು ಪೂಜಿಸಿದರೆ ಪೌರುಷವಂತ, ಧನವಂತ, ಧಾರ್ಮಿಕ ಸ್ವಭಾವ ಉಂಟಾಗುತ್ತದೆ.

ಮೂಲ ನಕ್ಷತ್ರ : ನಿರುತಿ. ಮೂಲ ನಕ್ಷತ್ರದ ದಿವಸ ನಿರುತಿ ದೇವತೆಯನ್ನು ಪೂಜಿಸಿದರೆ, ನರಕಯಾತನೆಯಿಂದ ಮುಕ್ತನಾಗುತ್ತಾನೆ. ದೋಷಗಳು ಪರಿಹಾರವಾಗುತ್ತದೆ.

ಪೂರ್ವಾಷಾಡ ನಕ್ಷತ್ರ : ಜಲದೇವತೆ. ಪೂರ್ವಾಷಾಡ ನಕ್ಷತ್ರದ ದಿವಸ ಜಲದೇವತೆ ಅಥವಾ ಗಂಗಾ ಮಾತೆಯನ್ನು ಪೂಜಿಸಿದರೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ನಿವಾರಣೆಯಾಗುತ್ತದೆ.

ಉತ್ತರಾಷಾಡ ನಕ್ಷತ್ರ : ವಿಶ್ವದೇವ. ಉತ್ತರಾಷಾಡ ನಕ್ಷತ್ರದ ದಿವಸ ವಿಶ್ವ ದೇವನನ್ನು ಹೂವುಗಳಿಂದ ಪೂಜಿಸಿದರೆ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುತ್ತದೆ.

ಶ್ರವಣ ನಕ್ಷತ್ರ : ವಿಷ್ಣು. ಶ್ರವಣ ನಕ್ಷತ್ರದ ದಿವಸ ವಿಷ್ಣುವನ್ನು ಹಳದಿ ಮತ್ತು ನೀಲಿ ಹೂವುಗಳಿಂದ ಪೂಜಿಸಿದರೆ, ಧನ ವೃದ್ದಿ, ಸ್ಪರ್ಧೆಗಳಲ್ಲಿ ಜಯಶಾಲಿಗಳಾಗುತ್ತಾರೆ. 

ಧನಿಷ್ಟ ನಕ್ಷತ್ರ : ವಸು. ಧನಿಷ್ಟ ನಕ್ಷತ್ರದ ದಿವಸ ವಸು ದೇವತೆಯನ್ನು ಗಂಧ, ಪುಪ್ಪಗಳಿಂದ ಪೂಜಿಸಿದರೆ, ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ. 

ಶತಭಿಷಾ ನಕ್ಷತ್ರ : ವರುಣ. ಶತಭಿಷಾ ನಕ್ಷತ್ರದಿವಸ ವರುಣ ದೇವತೆಯನ್ನು ಪೂಜಿಸಿದರೆ, ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗಿ ಶಕ್ತಿ, ಧನ, ವೃದ್ದಿಯಾಗುತ್ತದೆ.

ಪೂರ್ವಾಬಾದ್ರ ನಕ್ಷತ್ರ : ಅಜನ್ಮ (ರುದ್ರನ ಒಂದು ರೂಪ). ಪೂರ್ವಾಬಾದ್ರ ನಕ್ಷತ್ರದ ದಿವಸ ಅಜನ್ಮನನ್ನು ಪೂಜಿಸಿದರೆ, ಶ್ರದ್ದಾವಂತ, ಧರ್ಮನಿಷ್ಟನಾಗುತ್ತಾನೆ.

ಉತ್ತರಾಬಾದ್ರ ನಕ್ಷತ್ರ :  ಅಹಿರ್ಬುದ್ನ (ರುದ್ರನ ಒಂದು ರೂಪ). ಉತ್ತರಾಬಾದ್ರ ನಕ್ಷತ್ರದಿವಸ ಅಹಿರ್ಬುದ್ನ ದೇವತೆಯನ್ನು ಪೂಜಿಸಿದರೆ, ದೇವತಾಶಾಸ್ತ್ತ್ರ ನಿಪುಣನಾಗುತ್ತಾನೆ.

ರೇವತಿ ನಕ್ಷತ್ರ : ಪೂಷನ್ ಅಥವಾ ಸೂರ್ಯ. ರೇವತಿ ನಕ್ಷತ್ರದ ದಿವಸ ಪೂಷ ದೇವತೆಯನ್ನು, ಬಿಳಿ ಹೂವುಗಳಿಂದ ಪೂಜಿಸಿದರೆ, ಶುಭ ಉಂಟಾಗುತ್ತದೆ. ಸಾಹಸವಂತರಾಗುತ್ತಾರೆ. ದೋಷಗಳು ನಿವಾರಣೆಯಾಗುತ್ತದೆ. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.