ಗೆಳಯ, ನೀನು ನಾಚಿಕೆ ಸ್ವಭಾವದ ದೇವರು! : ಒಂದು ಹಫೀಜ್ ಪದ್ಯ

ಮೂಲ ~ ಹಫೀಜ್, ಸೂಫಿ ಸಂತ ಕವಿ | ಕನ್ನಡಕ್ಕೆ ~ ಚಿದಂಬರ ನರೇಂದ್ರ

ನೀನು
ಸಂಕೋಚದ ಸುಳಿಯಲ್ಲಿ
ಸಿಕ್ಕಿಹಾಕಿಕೊಂಡಿರುವ ಗಂಧ.
ನೀನು
ನಿನ್ನ ಜೊತೆಯೇ
ಕಣ್ಣುಮುಚ್ಚಾಲೆ ಆಡುತ್ತಿರುವ ಅಂಧ.

ಮುಸುಕಿನೊಳಗಿರುವ
“ನಾನು”
ಕಳಚಿ ಹೋಗಿಬಿಟ್ಟರೆ
ಆಮೇಲೆ ನಾಚುವ ಪ್ರಸಂಗವೇ ಇಲ್ಲ.

ನಿನ್ನ ಗೆಳೆಯ ಹಫೀಜ್ ನನ್ನು ಮಾತನಾಡಿಸು
ಅವನಿಗೆ ಈ ವಿಷಯದಲ್ಲಿ ಪಕ್ಕಾ ಸ್ಪಷ್ಟತೆ ಇದೆ.

ಒಮ್ಮೊಮ್ಮೆ
ಈ ಜಗತ್ತು ಜಾದೂ ಅನಿಸಬಹುದು
ಆದರೆ ಹಾಗೇನೂ ಇಲ್ಲ.
ಇಲ್ಲಿ ಒಬ್ಬರು ಹುಟ್ಟಿಸದೇ
ಬೇರೆ ಏನೊಂದೂ ಹುಟ್ಟುವುದಿಲ್ಲ.
ಪ್ರಯಾಣ ಶೂನ್ಯದಿಂದ ಶೂನ್ಯಕ್ಕೆ ಮಾತ್ರ.

ಇರುವೆಯ ಹುತ್ತಕ್ಕೆ ಲಗ್ಗೆ ಹಾಕಿರುವ
ಓ ಭವ್ಯ ಗಜರಾಜನೇ
ನಿನಗೆ ದಿವ್ಯ ಮರೆವಿನ ರೋಗ.

ಪ್ರೀತಿಯ ಗೆಳೆಯ,
ನೀನು
ನಾಚಿಕೆ ಸ್ವಭಾವದ ದೇವರು ಕಣೋ !

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.