ಬೆಂಗಳೂರಿನಲ್ಲಿ ರಾಮಕೃಷ್ಣ ಮಠ ಸ್ಥಾಪಿಸಿದ ಶ್ರೀ ರಾಮಕೃಷ್ಣಾನಂದರ ಬಗ್ಗೆ ತಿಳಿದಿದೆಯೇ?

ಇಡೀ ಭಾರತವನ್ನು ಸಂಚಾರಮಾಡಿ ರಾಮಕೃಷ್ಣಪರಮಹಂಸರ ಚರಿತ್ರೆಯನ್ನು ನಮಗಾಗಿ ನೀಡಿದ ಮಹಾಪುರುಷನ ಜಯಂತಿ ಇಂದು ಎಲ್ಲಾ ರಾಮಕೃಷ್ಣಮಠದಲ್ಲಿ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ರಾಮಕೃಷ್ಣಾನಂದರ ಪೂರ್ವಾಶ್ರಮದ ಹೆಸರು ಶಶಿಭೂಷನ್  ಚಕ್ರವರ್ತಿ. ಇವರು ಭಗವಾನ್ ರಾಮಕೃಷ್ಣಪರಮಹಂಸರ ನೇರಶಿಷ್ಯರಲ್ಲಿ ಇವರು ಒಬ್ಬರು. ಇವರ ತಂದೆ ವೇದ ಮತ್ತು ಧರ್ಮಶಾಸ್ತ್ರಗಳಲ್ಲಿ ಪ್ರಖಾಂಡ ಪಂಡಿತರು
ಆ ಪರಂಪರೆಯನ್ನು ಮುಂದುವರೆಸಿದಂತಹ ಶಶಿಭೂಷನ್ ಚಕ್ರವರ್ತಿ, ರಾಮಕೃಷ್ಣರ ಸೆಳೆತೆಕ್ಕೆ ಸಿಕ್ಕಿ ಅವರ ಸೇವೆಯಲ್ಲಿ ತಲ್ಲೀನರಾಗಿ ಸನ್ಯಾಸತ್ವದ ದೀಕ್ಷೆಯನ್ನು ಪಡೆದು  ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾಗಿ
ರಾಮಕೃಷ್ಣಾನಂದರಾದರು (ನೇರಶಿಷ್ಯರು 16 ಜನ ಇದ್ದಾರೆ ಅದರಲ್ಲಿ ವಿವೇಕಾನಂದರೂ ಒಬ್ಬರು) ರಾಮಕೃಷ್ಣ ಪರಮಹಂಸರ ಕಾಲವಾದ ನಂತರ ಇಡೀ ಭಾರತವನ್ನು ಸಂಚಾರಮಾಡಿ, ರಾಮಕೃಷ್ಣರ ಮಠಗಳನ್ನು ಸ್ಥಾಪಿಸಿದ್ದಾರೆ. ( ಬಸವನಗುಡಿ ರಾಮಕೃಷ್ಣ ಮಠವನ್ನು ಸ್ಥಾಪಿಸಿದ್ದೂ ಇವರೇ)

ಧರ್ಮಶಾಸ್ತ್ರ ವೇದಗಳಲ್ಲಿ ಮಹಾಪಂಡಿತರಾದ  ರಾಮಕೃಷ್ಣನಂದರು ಬೀಜಾಕ್ಷಗಳ ಮೂಲಕ ತಾತಂತ್ರಿಕವಾಗಿ ಭಗವಾನ್ ರಾಮಕೃಷ್ಣಪರಮಹಂಸರ ಪೂಜೆಯನ್ನು ಸಿದ್ದಪಡಿಸಿದರು. ಇಂದಿಗೂ ಇಡೀ ಜಗತ್ತಿನಲ್ಲಿ ರಾಮಕೃಷ್ಣಪರಮಹಂಸರ ಪೂಜೆ ಮತ್ತು
ಹೋಮವನ್ನು ಅದೇ ವಿಧಾನದಲ್ಲೇ ನಡೆಸುತ್ತಾಬರಲಾಗಿದೆ.

ಇಂದು ಇಡೀ ಜಗತ್ತಿಗೆ ರಾಮಕೃಷ್ಣಪರಮಹಂಸರ ಮತ್ತು ಮಾ ಶಾರದಾದೇವಿಯನ್ನು ಪರಿಚಯಿಸಿದ ಮಹಾತ್ಮರು
ಈ ರಾಮಕೃಷ್ಣಾನಂದರು. ಇವರ ಸಾಧನೆ ಅಗಾಧ. ಇವರು ಬದುಕಿದ್ದು ಕೇವಲ 48 ವರ್ಷಗಳು ಮಾತ್ರ ,
ಅಷ್ಟರಲ್ಲೇ ಇಡೀ ಭಾರತವನ್ನು ಸಂಚಾರಮಾಡಿ ರಾಮಕೃಷ್ಣಪರಮಹಂಸರ ಚರಿತ್ರೆಯನ್ನು ನಮಗಾಗಿ ನೀಡಿದ ಮಹಾಪುರುಷನ ಜಯಂತಿ ಇಂದು ಎಲ್ಲಾ ರಾಮಕೃಷ್ಣಮಠದಲ್ಲಿ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.