ದುಃಖವನ್ನು
ಬಟ್ಟಲಲ್ಲಿ ಸುರಿದುಕೊಂಡು
ಚಪ್ಪರಿಸುತ್ತ ಕುಳಿತಿದ್ದ ಸಂಕಟವನ್ನು
ಅಂತಃಕರಣದಿಂದ ಮಾತಿಗೆಳೆದೆ ;
” ಹೇಗಿದೆ ದುಃಖ? ರುಚಿಯಾಗಿದೆಯಾ?”
“ಓಹ್ ! ಸಿಕ್ಕಿಹಾಕಿಕೊಂಡೆ ”
ಕಿರುಚಿತು ಸಂಕಟ.
“ನನ್ನ ವ್ಯಾಪಾರಕ್ಕೆ ಕಲ್ಲು ಹಾಕಿದೆ ನೀನು,
ಮಾರಬೇಕೆಂದುಕೊಂಡಿದ್ದೆ
ನಿನ್ನ ದಯೆಯೆಂದು ಗೂತ್ತಾದ ಮೇಲೆ
ಹೇಗೆ ತಾನೆ ಮಾರಲಿ? ”
~ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ