ನೆರೆ ಸಂತ್ರಸ್ತರಿಗೆ ಸಹಾಯ : ದೇಣಿಗೆ ನೀಡಿ, ರಾಜ್ಯ ಸರ್ಕಾರದೊಡನೆ ಕೈಜೋಡಿಸಿ….

“ಶತ ಹಸ್ತ ಸಮಾಹರ, ಸಹಸ್ರಹಸ್ತ ಸಂಕಿರ” ಅಂದಿದ್ದಾರೆ ನಮ್ಮ ಪೂರ್ವಜರು. ನೂರು ಕೈಗಳಿಂದ ದುಡಿದು ಹಣ ಸಂಗ್ರಹಿಸಿ, ಸಾವಿರ ಕೈಗಳಿಂದ ಆ ಹಣವನ್ನು ಹಂಚಿ ಎಂದು ಇದರರ್ಥ.

ರಾಜ್ಯದ 15 ಜಿಲ್ಲೆಗಳು ಅತಿವೃಷ್ಟಿಯಿಂದ ತತ್ತರಿಸುತ್ತಿವೆ. ಅಪಾರ  ಹಾನಿಯೊಡನೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ವಿಷಮ ಪರಿಸ್ಥಿತಿಯಲ್ಲಿ ನಾವು ನೀಡುವ ಪ್ರತಿಯೊಂದು ರುಪಾಯಿ ಸಂತ್ರಸ್ತರ ಬದುಕಿಗೆ ನೆರವಾಗಲಿದೆ. ರಾಜ್ಯ ಸರ್ಕಾರ ಪರಿಹಾರ ಕಾರ್ಯ ಆರಂಭಿಸಿದ್ದು, ದೇಣಿಗೆ ನೀಡುವ ಮೂಲಕ ನಾವೂ ಈ ‘ಕರ್ತವ್ಯ’ದಲ್ಲಿ ಭಾಗಿಯಾಬಹುದು. ನಮ್ಮ ದುಡಿಮೆಯದೊಂದು ಚಿಕ್ಕ ಪಾಲನ್ನು ಸಂತ್ರಸ್ತರೊಡನೆ ಹಂಚಿಕೊಳ್ಳಲು ಇದೊಂದು ಅವಕಾಶ.

ನೆರೆ ಸಂತ್ರಸ್ತರಿಗೆ ದೇಣಿಗೆ ನಿಡಬೇಕಾದ ಖಾತೆ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇದು ರಾಜ್ಯ ಸರ್ಕಾರದ ಅಧಿಕೃತ ಪ್ರಕಟಣೆಯಾಗಿದ್ದು, ನೀವು ನೀಡುವ ಹಣ ನೇರವಾಗಿ ಸಂತ್ರಸ್ತರನ್ನು ತಲುಪಲಿದೆ.

Untitled-1.jpg

Leave a Reply